ಭಾರತದ ಪ್ರಥಮ ಪ್ರಜೆ ಪ್ರತಿಭಾ ಪಾಟೀಲ್ ಆಸ್ತಿ ಘೋಷಣೆ

ರಾಷ್ಟ್ರದ ಅಧ್ಯಕ್ಷರು ತಮ್ಮ ಸಂಪತ್ತನ್ನು ಘೋಷಿಸಬೇಕು ಎಂಬ ಕಾನೂನು ಇಲ್ಲ. ಆದರೆ, ಇದೇ ಮೊದಲ ಬಾರಿಗೆ ಭಾರತದ ಪ್ರೆಸಿಡೆಂಟ್ ತಮ್ಮ ಸಂಪತ್ತನ್ನು ಬಹಿರಂಗಪಡಿಸುವ ಮೂಲಕ ಹೊಸ ಸಂಪ್ರದಾಯ ಹುಟ್ಟುಹಾಕಿದ್ದಾರೆ.
ಅಮರವಾತಿಯಲ್ಲಿ 39 ಲಕ್ಷ ರು ಮೌಲ್ಯದ ಮನೆ ಹಾಗೂ 10 ಲಕ್ಷ ರು ಬೆಲೆ ಬಾಳುವ ಫಾರ್ಮ್ ಹೌಸ್ ಹೊಂದಿದ್ದಾರೆ. ಜಲಗಾಂವ್ ನಲ್ಲಿ 8 ಹೆಕ್ಟೇರ್ ಪ್ರದೇಶದ ಭೂಮಿ ಹೊಂದಿದ್ದು ಇದರ ಮೌಲ್ಯ ಸುಮಾರು 34 ಲಕ್ಷ ರು ಆಗಲಿದೆ. ಷೇರು ಹಾಗೂ ಅಭರಣಗಳ ಮೌಲ್ಯ ಒಟ್ಟು 2.5 ಕೋಟಿ ಹಾಗೂ ನಗದು 1.9 ಲಕ್ಷ ರು ಪ್ರತಿಭಾ ಅವರ ಬಳಿಯಲ್ಲಿದೆ.
ಆರ್ ಟಿಐ ಕಾಯಿದೆಗೆ ರಾಷ್ಟ್ರಪತಿಗಳನ್ನು ಒಳಪಡಿಸಲಾಗಿಲ್ಲ. ಆದರೆ, ಅವರ ಕುಟುಂಬದವರ ಆಸ್ತಿ ವಿವರ ಬಹಿರಂಗ ಪಡಿಸದಿರುವುದರಿಂದ ಮಾಹಿತಿ ಹಕ್ಕು ಕಾಯಿದೆ ಮೂಲಕ ಆವರ ಆಸ್ತಿ ವಿವರ ಪಡೆಯಬಹುದು.












Click it and Unblock the Notifications