ಮಧ್ಯಪ್ರದೇಶದ ಸರ್ಕಾರಿ ವೆಬ್ ನಲ್ಲಿ ಕಾಮೋತ್ತೇಜಕ ಆಡ್

ರಾಜ್ಯದ ಸಚಿವರು, ಅಧಿಕಾರಿಗಳು, ವಿಜ್ಞಾನಿಗಳು, ಶೈಕ್ಷಣಿಕ ತಜ್ಞರು ಹಾಗೂ ಇನ್ನಿತರ ಗಣ್ಯರರನ್ನು ಒಳಗೊಂಡಿರುವ Madhya Pradesh Council for Science and Technology (Mapcost) ವೆಬ್ ಸೈಟ್ ನಲ್ಲಿ ಮಧ್ಯಪ್ರದೇಶದ ವೈಜ್ಞಾನಿಕ ಹಾಗೂ ಮಾಹಿತಿ ತಂತ್ರಜ್ಞಾನ ನಿಯಮಗಳ ಪ್ರಚಾರಕ್ಕಾಗಿ ಮೀಸಲಿಡಲಾಗಿದೆ.
ಆದರೆ, ಗೊತ್ತಿದ್ದೋ ಗೊತ್ತಿಲ್ಲದೆಯೋ ಪುರುಷರ ಹಾಗೂ ಮಹಿಳೆಯರ ಲೈಂಗಿಕ ಶಕ್ತಿ ವರ್ಧಕ ಗುಳಿಗೆ ಕುರಿತ ಲಿಂಕ್ ರಾರಾಜಿಸುತ್ತಿದೆ. ಲಿಂಕ್ ಕ್ಲಿಕ್ ಮಾಡಿದರೆ ಆ ಕಂಪನಿ ವೆಬ್ ತಾಣಕ್ಕೆ ಹೋಗುತ್ತದೆ. ಅಲ್ಲಿ ಪಕ್ಕಾ ಲೈಂಗಿಕ ತಾಣದ ಜಾಹೀರಾತುಗಳು, ಕಾಂಡೋಮ್ ಆಡ್, ಲೈಂಗಿಕ ಗುಳಿಗೆಗಳ ವಿವರಗಳಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವೆಬ್ ನಿರ್ವಾಹಕರು, ಯಾವುದೇ ಖಾಸಗಿ ಜಾಹೀರಾತಿಗೆ ಅನುಮತಿ ನೀಡಿಲ್ಲ. ಇದು ಹೇಗೆ ನುಸುಳಿದೆ ಗೊತ್ತಿಲ್ಲ ಎಂದಿದ್ದಾರೆ. ಇನ್ನು ಕೆಲವರು ಯಾರಾದರು ಹ್ಯಾಕ್ ಮಾಡಿರಬಹುದು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸರ್ಕಾರಿ ವೆಬ್ ತಾಣದಲ್ಲಿ ಈ ರೀತಿ ಜಾಹೀರಾತು ಕಾಣಿಸಿಕೊಂಡಿರುವುದು ರಾಜ್ಯಕ್ಕೆ ಮಾಡಿದ ಅಪಮಾನ ಎಂದಿರುವ ಸೈಬರ್ ಕ್ರೈಂ ವಿಭಾಗ ತನಿಖೆ ಮುಂದುವರೆಸಿದೆ.












Click it and Unblock the Notifications