ಪೊಲೀಸ್ ಮೇಲೆ ಹಲ್ಲೆ : ಉಗಾಂಡಾ ವಿದ್ಯಾರ್ಥಿಗಳ ಸೆರೆ

Attack on police, 6 Uganda students arrested
ಬೆಂಗಳೂರು, ಜು. 23 : ರಾತ್ರಿ ಗಸ್ತಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಲ್ವರು ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಉಗಾಂಡಾದ ಕಾಲೇಜು ವಿದ್ಯಾರ್ಥಿಗಳನ್ನು ಶನಿವಾರ ಬೆಳಗಿನ ಜಾವ ಸಂಪಿಗೆನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರು ಜನರಲ್ಲಿ ಮೂವರು ವಿದ್ಯಾರ್ಥಿನಿಯರು.

ಇಪ್ಪತ್ತರ ಹರೆಯದಲ್ಲಿರುವ ಬಂಧಿತರು ರೊನಿ, ಬ್ರಿಯಾನ್, ಹುಸೇನ್, ಡಯಾನಾ, ಆಂಜಲ್ ಮತ್ತು ಮೇರಿ. ಇವರೆಲ್ಲ ಕುಡಿದ ಮತ್ತಿನಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರ ಮೇಲೆ ಕೋಲು ಮತ್ತು ಕಲ್ಲಿನಿಂದ ಹಲ್ಲೆ ಮಾಡಿದ್ದರು.

ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ವಾಹನವನ್ನು ನಿಲ್ಲಿಸಲು ಪೊಲೀಸರು ಕೋರಿದಾಗ, ಇವರೆಲ್ಲ ಗಲಾಟೆ ಮಾಡಿದ್ದರಲ್ಲದೆ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಇಬ್ಬರು ಪೊಲೀಸರನ್ನು ಆಸ್ಪತ್ರೆಗೂ ದಾಖಲಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 333 ಮತ್ತು ಸೆಕ್ಷನ್ 353ರ ಅಡಿಯಲ್ಲಿ ದೈಹಿಕ ಹಲ್ಲೆ ನಡೆಸಿದ್ದಕ್ಕಾಗಿ ಮತ್ತು ಕರ್ತವ್ಯನಿರತ ಅಧಿಕಾರಿಗಳನ್ನು ತಡೆದಿದ್ದಕ್ಕಾಗಿ ಬಂಧಿಸಲಾಗಿದೆ. ಅವರನ್ನು ಇಂದು ಮ್ಯಾಜಿಸ್ಟ್ರೇಟ್ ಎದುರಿಗೆ ಹಾಜರುಪಡಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+