ಬೆಂಗಳೂರು-ಎರ್ನಾಕುಲಂ ಹೊಸ ಸೂಪರ್ ಫಾಸ್ಟ್ ರೈಲು 24ರಿಂದ

Ernakulam-Bangalore-Ernakulam weekly from July 24
ಹುಬ್ಬಳ್ಳಿ, ಜೂನ್ 20: ರೈಲ್ವೆ ಬಜೆಟ್‌ನಲ್ಲಿ ಈಗಾಗಲೇ ಘೋಷಣೆ ಮಾಡಿರುವಂತೆ ಎರ್ನಾಕುಲಂ-ಬೆಂಗಳೂರು-ಎರ್ನಾಕುಲಂ (ಟ್ರೈನ್ ನಂ. 22607/ 22608) ಸೂಪರ್ ಫಾಸ್ಟ್ ರೈಲು ಸಂಚಾರ ಜುಲೈ 24ರಿಂದ ಆರಂಭವಾಗಲಿದೆ. ವಾರಕ್ಕೊಮ್ಮೆ ಈ ರೈಲು ಎರಡೂ ನಗರಗಳ ನಡುವೆ ಸಂಚರಿಸಲಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

ಎರ್ನಾಕುಲಂನಿಂದ ಪ್ರತಿ ಭಾನುವಾರ (24-7-2011 ರಿಂದ) ಸಂಜೆ 5ಕ್ಕೆ ಹೊರಡುವ ಈ ರೈಲು, ಮರುದಿನ ಬೆಳಿಗ್ಗೆ 4.20ಕ್ಕೆ ಬೆಂಗಳೂರು ಸೇರುತ್ತದೆ. ಹಾಗೆಯೇ ಪ್ರತಿ ಸೋಮವಾರ (25-7-11ರಿಂದ) ಬೆಂಗಳೂರಿನಿಂದ ಸಂಜೆ 5.15ಕ್ಕೆ ಹೊರಟು ಮರುದಿನ ಬೆಳಿಗ್ಗೆ 4.20ಕ್ಕೆ ಎರ್ನಾಕುಲಂ ಸೇರಲಿದೆ. ಈ ರೈಲಿಗೆ ಬಂಗಾರಪೇಟೆ, ಕೃಷ್ಣರಾಜಪುರ, ಸೇಲಂ, ಈರೋಡ್, ಪಾಲಕ್ಕಾಡ್, ತ್ರಿಶ್ಯೂರ್, ಅಲುವಾ ಮೊದಲಾದ ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+