ಇಂಥಾ ಸುಂದರ ಸಚಿವೆಯ ನಾನೆಲ್ಲೂ ಕಾಣೆನು

34 ವರ್ಶದ ಹೀನಾ ರಬ್ಬಾನಿ ಖಾರ್ ಪಾಕಿಸ್ತಾನದ ವಿದೇಶಾಂಗ ಖಾತೆ ನೀಡಲಾಗಿದೆ ಎಂದು ಅಲ್ಲಿನ ಸುದ್ದಿ ಮೂಲಗಳು ಹೇಳಿವೆ. ರಾಷ್ಟ್ರಪತಿ ಆಸಿಫ್ ಅಲಿ ಜರ್ದಾರಿಗೆ ಹೀನಾ ನೇಮಕಾತಿ ಬಗ್ಗೆ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅಧಿಕೃತ ಪತ್ರ ಬರೆದಿದ್ದಾರಂತೆ.
ಶಾ ಮಹಮ್ಮದ್ ಖುರೇಷಿ ಪದತ್ಯಾಗದ ನಂತರ ವಿದೇಶಾಂಗ ಖಾತೆಯ ಹಾಟ್ ಸೀಟ್ ಖಾಲಿ ಉಳಿದಿತ್ತು.ಈಗ ಹೀನಾ, ಸಚಿವ ಸ್ಥಾನ ಪಡೆಯುವುದು ಖಚಿತವಾದರೆ ಅತ್ಯಂತ ಕಿರಿಯ ಸಚಿವೆ ಎಂಬ ದಾಖಲೆ ಹೊಂದಲಿದ್ದಾರೆ. ಈ ಮುಂಚೆ 35 ವರ್ಷ ವಯಸ್ಸಿನಲ್ಲಿ ಜುಲ್ಫಿಕರ್ ಅಲಿ ಭುಟ್ಟೊ ಅವರು ಸಚಿವರಾಗಿದ್ದರು ನಂತರ ಪಾಕಿಸ್ತಾನದ ಪ್ರಧಾನಿಯೂ ಆದರು.
ಈಗ ಹೀನಾ, ಭಾರತದ ವಿದೇಶಾಂಗ ಖಾತೆ ಸಚಿವ ಸೋಮನಹಳ್ಳಿ ಚಿರಯುವಕ ಕೃಷ್ಣ ಅವರ ಸರಿಸಾಟಿಯಾಗಿ ಕೂತು ಶಾಂತಿ ಮಾತುಕತೆ ಬಗ್ಗೆ ಚರ್ಚಿಸಲಿದ್ದಾರೆ.












Click it and Unblock the Notifications