ಎಂಎಸ್ ಧೋನಿ ವಿಶ್ವಕಪ್ ಬ್ಯಾಟ್ ಭಾರಿ ಮೊತ್ತಕ್ಕೆ ಹರಾಜು
ಲಂಡನ್
ಜು 19: ಭಾರತಕ್ಕೆ ವಿಶ್ವಕಪ್ 2011 ಗೆಲ್ಲಿಸಿಕೊಟ್ಟ ನಾಯಕ ಎಂಎಸ್ ಧೋನಿ ಅವರ ನೆಚ್ಚಿನ ಬ್ಯಾಟನ್ನು ಸೋಮವಾರ ರಾತ್ರಿ ಹರಾಜು ಹಾಕಲಾಯಿತು. ಅನಾಮಧೇಯ ವ್ಯಕ್ತಿಯೊಬ್ಬ 72 ಲಕ್ಷ ರೂ ಕೊಟ್ಟು ಧೋನಿ ಬ್ಯಾಟನ್ನು ಹೆಗಲಿಗೇರಿಸಿಕೊಂಡು ನಡೆದ ಎಂದು ತಿಳಿದು ಬಂದಿದೆ. id="toptextpromo">ಧೋನಿ
ತಮ್ಮ ಪತ್ನಿ ನಡೆಸುವ ಸಾಕ್ಷಿ ಫೌಂಡೇಷನ್ ಎಂಬ ಸರ್ಕಾರೇತರ ಸಂಸ್ಥೆಗೆ ಹಣ ಸಂಗ್ರಹಿಸಲು ಬ್ಯಾಟನ್ನು ಹರಾಜಿಗಿಟ್ಟಿದ್ದರು. ಸಾಕ್ಷಿ ಫೌಂಡೇಷನ್ ಮೂಲಕ ನಿರ್ಗತಿಕ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಲಾಗುತ್ತದೆ. ಧೋನಿ ಲಕ್ಕಿ ಬ್ಯಾಟ್ ಗೆದ್ದವ ಆರ್ ಕೆ ಗ್ರೂಪ್ ನ ಸಿಬ್ಬಂದಿ ಎಂದು ತಿಳಿದು ಬಂದಿದೆ. ಹೆಚ್ಚಿನ ವಿವರಗಳು ತಿಳಿದಿಲ್ಲ. id='are-slot-1' class='oiad oi-axt oiadv'> id='top-searched-articles'>ಶ್ರೀಲಂಕಾ
ವಿರುದ್ಧದ ಅಂತಿಮ ಹಣಾಹಣಿಯಲ್ಲಿ 79 ಎಸೆತಗಳಲ್ಲಿ 91 ರನ್ ಸಿಡಿಸಿದ ಅಜೇಯರಾಗಿ ಉಳಿದ ಧೋನಿ, ತಮ್ಮ ನೆಚ್ಚಿನ ಬ್ಯಾಟ್ ಮೂಲಕ ಸಿಕ್ಸರ್ ಸಿಡಿಸಿ ಭಾರತಕ್ಕೆ ಜಯ ತಂದುಕೊಟ್ಟಿದ್ದರು.











Click it and Unblock the Notifications