ಮುಂಬೈ ಸ್ಫೋಟ ತನಿಖೆಗೆ FBI ನೆರವು : ಬಿಪಿನ್

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐವರನ್ನು ಮುಂಬೈ ಎಟಿಎಸ್ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂಬುದು ತಮ್ಮ ಗಮನಕ್ಕೆ ಬರುತ್ತಿದ್ದಂತೆ ವಿಶೇಷ ಪೊಲೀಸ್ ತಂಡ ರಚಿಸಿಕೊಂಡು ಸೋಮವಾರ ಮುಂಬೈಗೂ ಹೊರಟಿದ್ದಾರೆ.
ಈ ಮಧ್ಯೆ, ತ್ರಿವಳಿ ಸ್ಫೋಟದ ಸಂಬಂಧ ಅಮೆರಿಕದ ಎಫ್ ಬಿಐ ನೆರವು ಕೋರಿರುವುದಾಗಿಯೂ ತಿಳಿದುಬಂದಿದೆ. ಸ್ಫೋಟದಲ್ಲಿ ಬಳಸಿರುವ ವಸ್ತುಗಳ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಲು FBI ತಂಡವೊಂದು ( US Federal Bureau of Investigation) ಈಗಾಗಲೇ ಮುಂಬೈನತ್ತ ಮುಖಮಾಡಿದೆ.
ಮಂಗಳೂರು ಪೊಲೀಸ್ ಮಹಾನಿರ್ದೇಶಕರೂ ಆಗಿರುವ ಬಿಪಿನ್ ಅವರನ್ನು ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ (ATS) ಅಧಿಕಾರಿಗಳು ಜುಲೈ 17ರಂದು ಮಾತುಕತೆ ನಡೆಸಿದ ವೇಳೆ FBI ನೆರವು ಯಾಚಿಸುವ ಬಗ್ಗೆ ತೀರ್ಮಾನಿಸಲಾಯಿತು ಎಂದು ಉನ್ನತ ಮೂಲಗಳು ಹೇಳಿವೆ.
ಈ ಮಧ್ಯೆ, FBI ತಂಡ ತನಿಖೆಗೆ ನೆರವು ನೀಡಲು ಸಿದ್ಧವಿರುವುದಾಗಿ ತಿಳಿಸಿದೆ. ಸ್ಫೋಟದಲ್ಲಿ ಬಳಸಿರುವ ವಸ್ತುಗಳು ಎಂಥವು ಎಂಬುದು ಸ್ಪಷ್ಟವಾಗುತ್ತಿದ್ದಂತೆ ಅಂಥ ವಸ್ತುಗಳನ್ನು ಬಳಸುವ ಪಾತಕಿಗಳನ್ನು ಪತ್ತೆ ಹಚ್ಚುವುದು ಸುಲಭವಾದೀತು ಎಂಬುದು ಇದರ ಲೆಕ್ಕಾಚಾರವಾಗಿದೆ.












Click it and Unblock the Notifications