ಸೆಕ್ಸ್ ಗಾಗಿ ಮಹಿಳೆಯ ನಗ್ನ ಚಿತ್ರ ತೆಗೆದ ಕಾಮುಕನ ಶಿರಚ್ಛೇದ
ರಿಯಾದ್,
ಜುಲೈ 18: ಕಾಮುಕನೊಬ್ಬ ಸೌದಿ ಮಹಿಳೆಯ ಮೇಲೆ ವ್ಯಾಮೋಹಗೊಂಡು, ಸೆಕ್ಸ್ ಗಾಗಿ ಆಕೆಯನ್ನು ಬೆದರಿಸಲು ನಗ್ನ ಚಿತ್ರಗಳನ್ನು ತೆಗೆದ ಆಪಾದನೆ ಸಾಬೀತುಗೊಂಡ ಹಿನ್ನೆಲೆಯಲ್ಲಿ ಸೌದಿ ಅಧಿಕಾರಿಗಳು ಅವನ ಶಿರಚ್ಛೇದ ಮಾಡಿದ್ದಾರೆ. id="toptextpromo">ಆಪಾದಿತ
ವ್ಯಕ್ತಿಯು ಮಹಿಳೆಯ ಮನೆಗೆ ನುಗ್ಗಿ ಆಕೆಯ ಪತಿಯ ಮುಂದೆಯೇ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ನಗ್ನ ಚಿತ್ರಗಳನ್ನು ತೆಗೆದಿದ್ದ ಎಂದು ಸೌದಿ ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ. ಅಪರಾಧಿಯ ಶಿರವನ್ನು ಶುಕ್ರವಾರ (ಜುಲೈ 15) ಒಂದೇ ಏಟಿಗೆ ಕತ್ತರಿಸಲಾಯಿತು ಎಂದು ಸಚಿವಾಲಯ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ಹತ್ಯೆ,
ಮಾದಕ ವಸ್ತು ಕಳ್ಳಸಾಗಾಟ, ಅತ್ಯಾಚಾರ ಹಾಗೂ ಶಸ್ತ್ರಸಜ್ಜಿತ ದರೋಡೆ ಪ್ರಕರಣಗಳಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟ ವ್ಯಕ್ತಿಗೆ ಶಿರಚ್ಛೇದದಂಥ ಶಿಕ್ಷೆ ವಿಧಿಸುವ ಕಾನೂನು ಸೌದಿಯಲ್ಲಿ ಜಾರಿಯಲ್ಲಿದೆ. ಪ್ರಸಕ್ತ ವರ್ಷ ಇದುವರೆಗೆ ಸೌದಿ ಸರಕಾರವು 31 ಮಂದಿಯ ಶಿರಚ್ಛೇದ ಮಾಡಿದೆ.











Click it and Unblock the Notifications