ಬೆಂಗಳೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸತತ ಅತ್ಯಾಚಾರ

ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಕ್ಕೆ ಇದು ಇನ್ನೊಂದು ಉದಾಹರಣೆ. ಆಂಧ್ರದ ಮೂಲದ 13 ವರ್ಷದ ಹುಡುಗಿಯನ್ನು ಮಕ್ಕಳ ಸಹಾಯ ವಾಣಿ ಮತ್ತು ಪೊಲೀಸರು ಕಾಪಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೀನ ಮತ್ತು ಅಪ್ಪಿ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಇಬ್ಬರು ಭಾಗಿಯಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದನ್ನು ನಿಮ್ಹಾನ್ಸ್ ದೃಢಪಡಿಸಿದೆ.
ತೀವ್ರವಾಗಿ ಆಘಾತಕ್ಕೊಳಗಾಗಿರುವ ಬಾಲಕಿಯಿಂದ ಮಾತೇ ಹೊರಡುತ್ತಿಲ್ಲ. ಆಕೆಯಿಂದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ವಿವರಗಳನ್ನು ಪಡೆಯಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಬಾಲಕಿಯ ಹಿನ್ನೆಲೆಯೂ ತಿಳಿದುಬಂದಿಲ್ಲ.
ದಕ್ಕಿದ ಕೆಲ ಮಾಹಿತಿಯ ಪ್ರಕಾರ, ಆಕೆಯನ್ನು ಮನೆಗೆಲಸಕ್ಕಾಗಿ ಆಂಧ್ರದಿಂದ ಕರೆತರಲಾಗಿತ್ತು. ಅಲ್ಲಿ ಜಾಸ್ತಿ ದಿನ ಇರದ ಆಕೆ ಮನೆಕಟ್ಟುವ ಕೆಲಸದಲ್ಲಿ ನಿರತಳಾಗಿದ್ದಳು. ಆಗ, ಆಕೆಗೆ ಬೇರೆ ಕೆಲಸದ ಆಮಿಷ ತೋರಿಸಿ ಸೀನ, ಅಪ್ಪಿ ಆಕೆಯನ್ನು ಪುಸಲಾಯಿಸಿ ಶೆಡ್ ನಲ್ಲಿ ಕೂಡಿಟ್ಟು ಸತತವಾಗಿ ಮೂರು ದಿನ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಇದು ಹೇಗೋ ನೆರೆಹೊರೆಯವರಿಗೆ ತಿಳಿದು ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನೂ ಇಬ್ಬರು ಅತ್ಯಾಚಾರಿಗಳ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ ಮತ್ತು ಬಾಲಕಿಯ ಹಿನ್ನೆಲೆ ತಿಳಿದುಕೊಳ್ಳಲು ಆಂಧ್ರ ಪೊಲೀಸರನ್ನು ಸಂಪರ್ಕಿಸಿದ್ದಾರೆ.












Click it and Unblock the Notifications