ಸಿರಿಂಜ್ ಮೂಲಕ ಹೆಂಡತಿ ರಕ್ತ ಕುಡಿಯುತ್ತಿದ್ದ ರಕ್ಕಸ

ಈ ರಾಕ್ಷಸನ ಹೆಸರು ಮಹೇಶ್ ಅಹಿರ್‌ವಾರ್. ಕಳೆದ ಮೂರು ವರ್ಷಗಳ ಹಿಂದೆ ಈತ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ದೀಪಾ (22) ಎಂಬಾಕೆಯನ್ನು ಮದುವೆಯಾಗಿದ್ದ. ಅಂದಿನಿಂದ ಆಕೆಯ ರಕ್ತ ಕುಡಿಯುವ ಕೆಟ್ಟ ಚಾಳಿಯನ್ನು ಮೈಗೂಡಿಸಿಕೊಂಡು ಬಂದಿದ್ದಾನೆ.
ಸಿರಿಂಜ್ ಮೂಲಕ ಈ ದುಷ್ಟ ಗಂಡ ದೀಪಾಳ ತೋಳುಗಳಿಂದ ರಕ್ತ ಹೀರಿ ಖಾಲಿ ಗ್ಲಾಸಿನಲ್ಲಿ ತುಂಬಿಸಿ ನಂತರ ಕುಡಿಯುತ್ತಿದ್ದ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ದೀಪಾಳಿಗೆ ಬೆದರಿಕೆ ಒಡ್ಡುತ್ತಿದ್ದ. ಹಾಗಂತ ಸ್ವತಃ ದೀಪಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಇಷ್ಟಕ್ಕೂ ಈತ ದೀಪಾಳ ರಕ್ತ ಏಕೆ ಕುಡಿಯುತ್ತಿದ್ದ ಎಂದರೆ. "ನಾನು ಶಕ್ತಿವಂತವಾಗುತ್ತೇನೆ. ಹೆಚ್ಚಿಗೇನು ಇಲ್ಲ ನೀನು ಗರ್ಭಿಣಿ ಆಗುವವರೆ ಕುಡಿಯುತ್ತೇನೆ" ಎಂದು ಸಮಜಾಯಿಷಿ ನೀಡಿದ್ದನಂತೆ. ಆದರೆ ಮಗು ಹುಟ್ಟು ಏಳು ತಿಂಗಳಾದರೂ ಇನ್ನೂ ರಕ್ತ ಹೀರುವ ಚಾಳಿ ಬಿಟ್ಟಿರಲಿಲ್ಲ ಎಂದು ಆಕೆ ದೂರು ನೀಡಿದ್ದಾರೆ.
ಒಂದು ತಿಂಗಳ ಹಿಂದಷ್ಟೆ ಈಕೆ ತನ್ನ್ನ ರಾಕ್ಷಸಿ ಗಂಡನಿಂದ ತಪ್ಪಿಸಿಕೊಂಡು ತವರು ಮನೆ ಸೇರಿದ್ದಳು. ಅಲ್ಲಿ ತನ್ನ ತಂದೆಗೆ ಗಂಡನ ರಕ್ತ ಹೀರುವ ಚಾಳಿಯನ್ನು ಹೇಳಿಕೊಂಡು ಕಣ್ಣೀರಿಟ್ಟಿದ್ದಳು. ಕಡೆಗೆ ಪೋಷಕರ ಸಹಾಯ ಪಡೆದು ಪೊಲೀಸರಿಗೆ ದೂರು ನೀಡಿದ್ದಾರೆ. ಈಗಾತ ಪೊಲೀಸರ ಅತಿಥಿ. (ಏಜೆನ್ಸೀಸ್)












Click it and Unblock the Notifications