ಡ್ಯಾನ್ಸ್ ಟೀಚರ್, ಸಹಪಾಠಿಗಳಿಂದ 16ರ ಬಾಲೆಯ ಮೇಲೆ ಅತ್ಯಾಚಾರ

Delhi Dance teacher his friends gangrape teenager
ನವದೆಹಲಿ, ಜುಲೈ 18: ಡ್ಯಾನ್ಸ್ ಟೀಚರ್ ಹಾಗೂ ಅವನ ಮೂವರು ಸಹಪಾಠಿಗಳು 16ರ ಬಾಲೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಕಳೆದ ವಾರ ಪಶ್ಚಿಮ ದೆಹಲಿಯಲ್ಲಿ ನಡೆದಿದೆ. ನಾಲ್ಕೂ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಡವಾಗಿ ತಿಳಿಸಿದ್ದಾರೆ.

ವಿಕಾಸಪುರಿಯಲ್ಲಿರುವ ಡಿಕೆಎಸ್ ಡ್ಯಾನ್ಸ್ ತರಬೇತಿ ಕೇಂದ್ರದಲ್ಲಿ ಗುಲ್ಷನ್ ಮತ್ತು ಅವನ ತಂಡ ಜುಲೈ 5ರಂದು ಯುವತಿಯ ಮೇಲೆ ಪೈಶಾಚಿಕ ರೀತಿಯಲ್ಲಿ ಮುಗಿಬಿದ್ದು, ಈ ಹೇಯ ಕೃತ್ಯವೆಸಗಿದೆ. ಅತ್ಯಾಚಾರದ ಬಳಿಕ ಯುವತಿಯನ್ನು ಗುಲ್ಷನ್ ದಬ್ರಿಯಲ್ಲಿರುವ ತನ್ನ ಮನೆಯಲ್ಲೇ ಬಚ್ಚಿಟ್ಟಿದ್ದ. ಕಾಣೆಯಾಗಿದ್ದ ಯುವತಿಯನ್ನು ಪೊಲೀಸರು ಜುಲೈ 7ರಂದು ಹುಡುಕಿಕೊಂಡು ಬಂದಾಗ, ಗೃಹಬಂಧನದಲ್ಲಿ ಇರುವುದನ್ನು ಪತ್ತೆ ಹಚ್ಚಿ, ಆಕೆಯನ್ನು ರಕ್ಷಿಸಿದರು.

'ಅವಳ ಮೇಲೆ ಮೋಹಗೊಂಡಿದ್ದೆ. ಜುಲೈ 5ರಂದು ಡ್ಯಾನ್ಸ್ ಕ್ಲಾಸ್ ಮುಗಿದ ನಂತರ ಯುವತಿಯನ್ನು ಪಕ್ಕದ ಪಾರ್ಕಿಗೆ ಕರೆದುಕೊಂಡು ಹೋಗಿ ಮಾತನಾಡಿಸಿದೆ. ಆ ಸಂದರ್ಭದಲ್ಲಿ ತರಗತಿಯಲ್ಲೇ ಉಳಿಯುವಂತೆ ಯುವತಿಗೆ ಸೂಚಿಸಿದೆ. ನಂತರ ಫೋನ್ ಮಾಡಿ ಸ್ನೇಹಿತರನ್ನು ಕರೆಸಿಕೊಂಡೆ. ಅವರು ಬರುತ್ತಿದ್ದಂತೆಯೇ ಗ್ಯಾಂಗ್ ರೇಪಿಗೆ ಮುಂದಾದೆವು. ನಂತರ ಅಂದು ರಾತ್ರಿ ಅವಳನ್ನು ಸ್ಕೂಲಿನಲ್ಲಿಯೇ ಕೂಡಿಹಾಕಿದೆವು. ಬೆಳಗಾಗುತ್ತಿದ್ದಂತೆಯೇ ಅವಳನ್ನು ನನ್ ಮನೆಗೆ ಕರೆದೊಯ್ದೆ' ಎಂದು ಗುಲ್ಷನ್ ಪೊಲೀಸರಿಗೆ ವರದಿ ಒಪ್ಪಿಸಿದ್ದಾನೆ.

ಯುವತಿಯ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಗುಲ್ಷನ್ ಮತ್ತು ರಾಮ್ ನನ್ನು ಬಂಧಿಸಿಲಾಗಿದ್ದು, ಇನ್ನಿಬ್ಬರನ್ನು ಬಾಲಾಪರಾಧ ಕೇಂದ್ರಕ್ಕೆ ಕಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+