ಭಾರತದ ಫ್ಯಾಷನ್ ಮಾರುಕಟ್ಟೆಗೆ ಅಮೆಜಾನ್.ಕಾಂ

ಪುಸ್ತಕ ಮಾರಾಟಕ್ಕೆ ಮಾತ್ರ ಮೀಸಲಾಗಿದ್ದ ಅಮೆಜಾನ್.ಕಾಂ, ಈಗ ಫ್ಯಾಷನ್ ಮಾರುಕಟ್ಟೆಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದೆ. ಈಗ ಗ್ರಾಹಕರು ಅಮೆಜಾನ್ ಒಡೆತನದ ಮೈಹಾಬಿಟ್.ಕಾಂ ಹಾಗೂ ಎಂಡ್ ಲೆಸ್ .ಕಾಂ ತಾಣಗಳ ಮೂಲಕ ತಮಗೆ ಇಷ್ಟವಾದ ಅಂತಾರಾಷ್ಟೀಯ ಗುಣಮಟ್ಟದ ಬ್ರ್ಯಾಂಡ್ ವಸ್ತುಗಳನ್ನು ಖರೀದಿಸಬಹುದು.
ಮೈಹಾಬಿಟ್.ಕಾಂ ಅಮೆಜಾನ್ ನ ಖಾಸಗಿ ಶಾಪಿಂಗ್ ತಾಣವಾಗಿದ್ದು, ಗ್ರಾಹಕರು ಆನ್ ಲೈನ್ ಖಾತೆ ಹೊಂದಿದ್ದರೆ ಮಾತ್ರ ಶಾಪಿಂಗ್ ಸಾಧ್ಯ. ಎಂಡ್ ಲೆಸ್ ಗೆ ಸುಲಭವಾಗಿ ಪ್ರವೇಶಿಸಬಹುದು. ಇದರಲ್ಲಿ ಹಲವು ವಿನ್ಯಾಸದ ಶೂಗಳು ಹಾಗೂ ಬ್ಯಾಗ್ ಗಳಿವೆ. ಅಮೆಜಾನ್ ಖಾತೆ ಹೊಂದಿರುವ ಗ್ರಾಹಕರು ನೇರವಾಗಿ ಖರೀದಿಗೆ ಮುಂದಾಗಬಹುದು.
ಎಂಡ್ ಲೆಸ್ ಮೂಲಕ 100 ಡಾಲರ್ ಗೂ ಅಧಿಕ ವೆಚ್ಚದ ವಸ್ತು ಖರೀದಿಸಿದರೆ ಯಾವುದೇ ಶಿಪ್ಪಿಂಗ್ ವೆಚ್ಚ ಭರಿಸಬೇಕಾಗಿಲ್ಲ. ಆದರೆ, ಮೈ ಹಾಬಿಟ್ 15 ಡಾಲರ್ ಹಣ ಪಡೆಯುತ್ತದೆ. ಆಮದು ವೆಚ್ಚ ಇದ್ದರೆ ಅದನ್ನು ಗ್ರಾಹಕರೇ ತೆರಬೇಕು. ಆನ್ ಲೈನ್ ಮೂಲಕ ಖರೀದಿಸಿದ ವಸ್ತು, ಮೂರ್ನಾಲ್ಕು ದಿನಗಳಲ್ಲಿ ನಿಮ್ಮ ಮನೆ ತಲುಪಲಿದೆ ಎಂದು ಅಮೆಜಾನ್ ವಕ್ತಾರರು ಹೇಳಿದ್ದಾರೆ.












Click it and Unblock the Notifications