ಮೆಜೆಸ್ಟಿಕ್‌ನಲ್ಲಿ ಎರಡು ಡಬಲ್ ಬ್ಯಾರಲ್ ಗನ್ ಪತ್ತೆ
ಬೆಂಗಳೂರು,
ಜು.16: ಸದಾ ಜನನಿಬಿಡವಾಗಿರುವ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಶುಕ್ರವಾರ (ಜು.15) ಸಂಜೆ ಎರಡು ಡಬಲ್ ಬ್ಯಾರಲ್ ಗನ್‌ಗಳು ಪತ್ತೆಯಾಗಿವೆ. ಅನಾಥವಾಗಿ ಬಿದ್ದದ್ದ ಬ್ಯಾಗ್‌ನಲ್ಲಿ ಈ ಗನ್‌ಗಳನ್ನು ಇಡಲಾಗಿತ್ತು. ಮೊದಲೆ ಬಾಂಬ್ ಭೀತಿಯಿಂದ ಕಂಗಾಲಾಗಿರುವ ಜನ ಈ ಅನಾಥ ಬ್ಯಾಗಿ ಕಂಡು ಮತ್ತಷ್ಟು ಥರಗುಟ್ಟಿದ್ದಾರೆ. ಈ ಬಗ್ಗೆ ಪೊಲೀಸರ ಕಿವಿಗೂ ಸುದ್ದಿ ಮುಟ್ಟಿಸಿದ್ದಾರೆ. id="toptextpromo">ಕೂಡಲೆ
ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಬ್ಯಾಗನ್ನು ಪರಿಶೀಲಿಸಿ ವಶಕ್ಕೆ ತೆಗೆದುಕೊಂಡಾಗ ಈ ಗನ್‌ಗಳು ಪತ್ತೆಯಾಗಿವೆ. ಗನ್‌ಗಳ ಜೊತೆ 14 ಕಾಟ್ರಿಡ್ಜ್‌ಗಳು ಬ್ಯಾಗ್‌ನಲ್ಲಿದ್ದವು. ಉಪ್ಪಾರಪೇಟೆ ಪೊಲೀಸರು ತನಿಖೆ ನಡೆಸಲಾಗಿ ಈ ಗನ್‌ಗಳು ಬಿಹಾರದ ವ್ಯಕ್ತಿಗಳಿಗೆ ಸೇರಿದವು ಎಂದು ಗೊತ್ತಾಗಿದೆ. id='are-slot-1' class='oiad oi-axt oiadv'> id='top-searched-articles'>ಒಂದು
ಗನ್‌ನ ಲೈಸೆನ್ಸ್ ರಿನೀವಲ್ ಆಗಿಲ್ಲ ಹಾಗೂ ಇನ್ನೊಂದಕ್ಕೆ ಲೈಸೆನ್ಸ್ ಇತ್ತು. ಒಂದು ಗನ್ ಬಿಹಾರದ ಯೋಗೇಂದ್ರ ಸಿಂಗ್ ಎಂಬಾತನಿಗೆ ಸೇರಿದ್ದು ಎಂದು ಪೊಲೀಸರು ಪತ್ತ್ತೆ ಮಾಡಿದ್ದಾರೆ. ಇವರು ಈ ಗನ್‌ಗಳನ್ನು ಮೆಜೆಸ್ಟಿಕ್‌ನಲ್ಲಿ ಏಕೆ ಅನಾಥವಾಗಿ ಬಿಟ್ಟು ಹೋದರು, ಇದರ ಹಿಂದಿನ ಉದ್ದೇಶವೇನು ಎಂಬ ಬಗ್ಗೆ ಪೊಲೀಸರು ಇನ್ನಷ್ಟೆ ತನಿಖೆ ನಡೆಸಬೇಕಿದೆ. (ದಟ್ಸ್‌ಕನ್ನಡ ವಾರ್ತೆ)











Click it and Unblock the Notifications