ಕರ್ನಾಟಕದ ಸೊಸೆ ನಿರುಪಮಾ ಅಮೆರಿಕಾದ ರಾಯಭಾರಿ

ಅಮೆರಿಕಾ ಮತ್ತು ಭಾರತದ ನಡುವೆ ಎರಡನೇ ಸುತ್ತಿನ ರಾಜತಾಂತ್ರಿಕ ಮಾತುಕತೆ ನಡೆಯುವ ಮೊದಲು ತಮ್ಮ ಹೊಸ ಕೆಲಸವನ್ನು ಅವರು ವಹಿಸಿಕೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರ ವಕ್ತಾರ ತಿಳಿಸಿದರು.
ಈ ವಿಷಯವನ್ನು ವಿದೇಶಾಂಗ ವ್ಯವಹಾರ ಕಾರ್ಯದರ್ಶಿ ವಿಷ್ಣು ಪ್ರಕಾಶ್ ಅವರು, ಟ್ವಿಟ್ಟರ್ ಸಾಮಾಜಿಕ ತಾಣದಲ್ಲಿ ಪ್ರಕಟ ಮಾಡಿದರು. ನಿರುಪಮಾ ರಾವ್ ಅವರು ಚೀನಾ ಮತ್ತು ಶ್ರೀಲಂಕಾಗೂ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದರು.
ವಿದೇಶಾಂಗ ವ್ಯವಹಾರ ಕಾರ್ಯದರ್ಶಿಯಾಗಿ ಅವರ ಅಧಿಕಾರಾವಧಿ ಜುಲೈ 31ರಂದು ಮುಗಿಯಲಿದೆ. ಅಮೆರಿಕಾದ ರಾಯಭಾರಿಯಾಗಿದ್ದ ಮೀರಾ ಶಂಕರ್ ಅವರ ಸ್ಥಾನವನ್ನು ಕರ್ನಾಟಕದ ಸೊಸೆ ನಿರುಪಮಾ ರಾವ್ ಅವರು ತುಂಬಲಿದ್ದಾರೆ.











Click it and Unblock the Notifications