ಮದ್ವೆ ಮಾಡ್ಕೋತೀನಿ ಎಂದು ಅತ್ಯಾಚಾರ ಮಾಡ್ತಿದ್ದ
ಅಮೃತಸರ,
ಜುಲೈ 15: ಅವ ನನ್ನ ಮದ್ವೆಯಾಗುವುದಾಗಿ ನಂಬಿಸಿ, ಒಂದೇ ಸಮನೆ ರೇಪ್ ಮಾಡ್ತಿದ್ದ ಎಂದು ಯುವತಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಕೆ ಈಗ ನಾಲ್ಕು ತಿಂಗಳ ಗರ್ಭಿಣಿ ಎಂಬುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. id="toptextpromo">ರಾಬಿನ್
ಸೇಠ್ ಎಂಬ ಯುವಕನೊಂದಿಗೆ ನನಗೆ ಲವಿ ಡವಿ ಇತ್ತು. ನನ್ನನ್ನು ಮದುವೆಯಾಗುವುದಾಗಿ ಹೇಳಿದ್ದ. ಆದರೆ ಈಗ ಕೈಕೊಟ್ಟಿದ್ದಾನೆ ಎಂದು ದೂರಿನಲ್ಲಿ ಯುವತಿ ಅಲವತ್ತುಕೊಂಡಿದ್ದಾಳೆ. ದೂರನ್ನು ದಾಖಲಿಸಿಕೊಂಡ ಪೊಲೀಸರು ಸೇಠ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿಕೊಂಡಿದ್ದು ಸೇಠ್, ಅವನ ಅಪ್ಪ-ಅಮ್ಮ, ಸೋದರ ಮತ್ತು ಸೋದರಿಯನ್ನು ಬಂಧಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ನಾಲ್ಕು
ತಿಂಗಳ ಹಿಂದೆ ಮನೆಯವರಿಗೆ ಪರಿಚಯಿಸ್ತೀನಿ ಎಂದು ನನ್ನನ್ನು ಅವರ ಮನೆಗೆ ಕರೆದೊಯ್ದ. ಸರಿ ಹಾಗೇ ಪರಿಚಯಿಸಿದ. ಆದರೆ ಕೆಲವೇ ಕ್ಷಣಗಳಲ್ಲಿ ಅವನ ರೂಮಿಗೆ ಕರೆದೊಯ್ದ. ಅಲ್ಲಿ ನನ್ನ ಮೇಲೆ ರೇಪ್ ಮಾಡಿದ ಎಂದು ಯುವತಿ ಹೇಳಿಕೊಂಡಿದ್ದಾಳೆ. ಆದರೆ ಮದುವೆಯಗುವವರೆಗೂ ಇಬ್ಬರೂ ಒಂದಾಗಿರುವುದನ್ನು ಬಹಿರಂಗಪಡಿಸಬೇಡ ಎಂದು ಎಚ್ಚರಿಸಿದ. ಆದರೆ ಮುಂದೆ, ಯಾವಾಗ ಮದುವೆಯಾಗ್ತೀಯ ಎಂದು ಕೇಳಿದಾಗಲೆಲ್ಲ ನನ್ನನ್ನು ಹಿಂಸಿಸುತ್ತಿದ್ದ ಎಂದೂ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.











Click it and Unblock the Notifications