ಝವೇರಿ ಬಜಾರಿನಲ್ಲಿ ಕೊಡೆ ಇಟ್ಟವರು ಯಾರು?

ದಾಖಲಾರ್ಹ ಅಂಶವೆಂದರೆ ಝವೇರಿ ಬಜಾರಿನಲ್ಲಿ ಸುಧಾರಿತ ಬಾಂಬನ್ನು ''ಕೊಡೆ''ಯಲ್ಲಿ ಇಡಲಾಗಿತ್ತು. ಮುಂನೈ ಪೊಲೀಸ್ ಆಯುಕ್ತ ಅರುಪ್ ಪಟ್ನಾಯಿಕ್ ಅವರೇ ತಿಳಿಸಿರುವಂತೆ ಛತ್ರಿಯೊಂದರಲ್ಲಿ ಸುಧಾರಿತ ಟೈಮರ್ ಬಾಂಬ್ ಇಡಲಾಗಿತ್ತು. 2003ರಲ್ಲಿ ಪ್ರೆಷರ್ ಕುಕ್ಕರ್ ನಲ್ಲಿ ಬಾಂಬ್ ಇಡಲಾಗಿತ್ತು ಎಂಬುದು ಗಮನಾರ್ಹ. ಆದರೆ ಈ ಬಾರಿ ಕೊಡೆ ಬಳಸಲಾಗಿತ್ತು. ಯಾಕಪಾ ಅಂದರೆ ಬುಧವಾರ ಸಂಜೆ ದಕ್ಷಿಣ ಮುಂಬೈನ ಈ ಭಾಗದಲ್ಲಿ ಮಳೆಯಾಗುತ್ತಿತ್ತು. ಆದ್ದರಿಂದ ಯಾರಿಗೂ ಅನುಮಾನ ಬಾರದಿರಲಿ ಎಂದು ಕೊಡೆಯೊಳಗೆ ಬಾಂಬಿಡಲಾಗಿತ್ತು.












Click it and Unblock the Notifications