ಬ್ರೇಕಿಂಗ್ ನ್ಯೂಸ್ : ಮುಂಬೈನಲ್ಲಿ 3 ಕಡೆ ಭಾರೀ ಸ್ಫೋಟ

ಅತ್ಯಂತ ಜನನಿಬಿಡ ಪ್ರದೇಶಗಳಾದ ದಾದರ್ ಬಳಿಯ ಕಬೂತರ್ ಖಾನಾ, ಜವೇರಿ ಬಜಾರ್ ಮತ್ತು ಓಪೆರಾ ಹೌಸ್ ಬಳಿ ಮೂರು ಬಲವಾದ ಸ್ಫೋಟಗಳು ಸಂಭವಿಸಿವೆ. ಎಸಿಪಿ ಮಧುಕರ್ ಪ್ರಕಾರ, ವಿದ್ಯುತ್ ಮೀಟರ್ ಬಾಕ್ಸ್ ನಲ್ಲಿ ಬಾಂಬ್ ಇಡಲಾಗಿತ್ತು. ಮತ್ತೊಂದೆಡೆ MH 43 A 9384 ಟ್ಯಾಕ್ಸಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. [ವಿಡಿಯೋ 1]
ಪೊಲೀಸರು ಸ್ಫೋಟ ನಡೆದ ಸ್ಥಳಕ್ಕೆ ಧಾವಿಸಿದ್ದು, ಮುಂಬೈ ನಗರದಾದ್ಯಂತ ಭಾರೀ ಕಟ್ಟೆಚ್ಚರ ವಹಿಸಲು ಪೊಲೀಸ್ ವರಿಷ್ಠರು ಆದೇಶಿಸಿದ್ದಾರೆ. ಓಪೆರಾ ಹೌಸ್ ಬಳಿ 100ಕ್ಕೂ ಹೆಚ್ಚಿನ ಜನ ಗಾಯಗೊಂಡಿರಬಹುದೆಂದು ಶಂಕಿಸಲಾಗಿದೆ. ಈ ಸ್ಫೋಟದ ಹೊಣೆಯನ್ನು ಯಾವ ಭಯೋತ್ಪಾದನಾ ಸಂಘಟನೆಯೂ ಹೊತ್ತಿಲ್ಲ. [ವಿಡಿಯೋ 2]
ಇತ್ತೀಚೆಗೆ ಬಂದ ವರದಿಯ ಪ್ರಕಾರ, 8 ಜನ ಸತ್ತಿದ್ದು, 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದು ಭಯೋತ್ಪಾದಕರ ಕೃತ್ಯ ಎಂಬುದನ್ನು ಕೇಂದ್ರ ಗೃಹ ಸಚಿವಾಲಯ ದೃಢಪಡಿಸಿದೆ.
ದೇಶದಾದ್ಯಂತ ಕಟ್ಟೆಚ್ಚರ : ಮುಂಬೈನಲ್ಲಿ ಬಾಂಬ್ ಸ್ಫೋಟ ಸಂಭವಿಸುತ್ತಿದ್ದಂತೆ ಬೆಂಗಳೂರು ಸೇರಿದಂತೆ ದೇಶದಾದ್ಯಂತ ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. [ವಿಡಿಯೋ 3]












Click it and Unblock the Notifications