ಕ್ಷಣದಲ್ಲೇ ಮುದ್ರಣ: ಬಂದಿದೆ ಕೊಡಾಕ್ ಹೊಸ ತಂತ್ರಜ್ಞಾನ

kodak-kiosk
ಬೆಂಗಳೂರು, ಜು. 13: ಈಗ ತಂತ್ರಜ್ಞಾನದ ಕಾಲ ಮೊದಲಿನಂತಿಲ್ಲ, ಸಾಕಷ್ಟು ಬದಲಾಗಿದೆ. ಈಗ ಕಾಲಕ್ಕೆ ಕಾಲೇ ರೆಕ್ಕೆಯಾಗಿದೆ. ಮೊದಲಿನಂತೆ ಒಂದು ತಂತ್ರಜ್ಞಾನವನ್ನೇ ಬಹಳ ಕಾಲ ನಂಬಿ ಕೂರುವಂತಿಲ್ಲ. ಇಂದು ಬಂದಿರುವ ತಂತ್ರಜ್ಞಾನ ಇಂದಿಗೆ ಮಾತ್ರ ಎಂಬ ಕಾಲ ಬಹಳ ದೂರವಿಲ್ಲ ಎಂಬುದು ಉತ್ಪ್ರೇಕ್ಷೆಯಾಗಲಾರದು!

5 ನಿಮಿಷದಲ್ಲಿ ಫೋಟೋ ರೆಡಿ ಎಂಬ ಬೋರ್ಟ್ ನೋಡಿ ಫೋಟೋ ಕ್ಲಿಕ್ಕಿಸಿಕೊಂಡು 5 ನಿಮಿಷ ಅಲ್ಲೇ ನಿಂತು ಫೋಟೋ ನೋಡಿ ಸಂತಸಪಡುವ ಕಾಲ ಹೊರಟೋಯ್ತು! 'ಒಂದೇ ನಿಮಿಷದಲ್ಲಿ' ಎಂಬ ಘೋಷಣೆಗೂ ಇನ್ನು ಕಾಲವಿಲ್ಲ. ಎಕೆಂದರೆ ಇದೀಗ ಹೊಸ ತಂತ್ರಜ್ಞಾನದಿಂದ ಕ್ಷಣದಲ್ಲೇ ಕೆಮರಾದಿಂದ ನೇರವಾಗಿ ಇಂಟರ್ ನೆಟ್ ಮೂಲಕ ಫೋಟೋ ರೆಡಿ!

ಕ್ಯಾಮರಾದಲ್ಲಿ ಫೋಟೋ ಕ್ಲಿಕ್ಕಿಸಿದ ಕೂಡಲೇ ಅಂತರ್ಜಾಲದ ಮೂಲಕ ಪ್ರಿಂಟ್ ಗೆ ಕಳಿಸುವ ತಂತ್ರಜ್ಞಾನವೊಂದನ್ನು ಕೊಡಾಕ್ ಸಂಸ್ಥೆ ಅಭಿವೃದ್ಧಿ ಪಡಿಸಿದೆ. 'ಕೊಡಾಕ್ ಫೊಟೋ ಎಕ್ಸ್ ಪ್ರೆಸ್' ಮಳಿಗೆಗಳಲ್ಲಿ ತಂತ್ರಜ್ಞಾನ ಬಳಕೆಗೆ ಬೇಕಾದ ಉಪಕರಣ ಜೋಡಿಸಲಾಗಿದೆ. ಸಾಮಾಜಿಕ ತಾಣಗಳಿಗೆ ಅಪ್ ಲೋಡ್ ಮಾಡಿರುವ ಫೋಟೋ ಗಳನ್ನು ಕೂಡ ಈ ತಂತ್ರಜ್ಞಾನ ಬಳಸಿ ಕ್ಷಣದಲ್ಲಿ ನಾವೇ ಮುದ್ರಿಸಿಕೊಳ್ಳಬಹುದು. ಹೇಗಿದೆ ನೋಡಿ ಚಮತ್ಕಾರ!

ಬಳಕೆಯ ವಿಧಾನ: ತಗೆದ ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳಾದ ಫೆಸ್ ಬುಕ್, ಆರ್ಕುಟ್, ಟ್ವೀಟರ್, ಪಿಕಾಸ, ಫ್ಲಿಕರ್ ಇತ್ಯಾದಿಗಳಿಗೆ ಲೋಡ್ ಮಾಡಿ. ನಂತರ ನೀವು ಕೊಡಾಕ್ ಎಕ್ಸ್ ಪ್ರೆಸ್ ಪೋಟೋ ಮಳಿಗೆಗೆ ಹೋಗಿ. ಅಲ್ಲಿ ಜೋಡಿಸಿರುವ ಕಿಯೋಸ್ಕ್ (ಕಂಪ್ಯೂಟರ್ ಪರದೆ) ಗಳನ್ನು ಬಳಸಿ ನಿಮ್ಮ ಜಾಲ ತಾಣಗಳಿಂದ ಫೊಟೋಗಳನ್ನು ಡೌನ್ ಲೋಡ್ ಮಾಡಿ, 'ಟಚ್ ಸ್ಕ್ರೀನ್' ಪರದೆಯಲ್ಲಿರುವ ಸೂಚನೆಯ ಮೂಲಕ ಫೋಟೋ ಅಳತೆ, ಆಕಾರ, ಕೊಲಾಜಿಂಗ್ ಎಲ್ಲವನ್ನೂ ಮುಗಿಸಿಕೊಂಡು ನಿಮಗಿಷ್ಟವಾದ 'ಫೋಟೋ ಪ್ರಿಂಟ್' ಒಯ್ಯಬಹುದು.

ಈ ತಂತ್ರಜ್ಞಾನವನ್ನು ಎಲ್ಲಾ ಕೊಡಾಕ್ ಕೆಮರಾಗಳಿಗೆ ಅಳವಡಿಸಲಾಗಿದೆ. ಈಗಿರುವ ಹೊಸ ತಂತ್ರಜ್ಞಾನದಿಂದ ಕಂಪ್ಯೂಟರ್ ಡೌನ್ ಲೋಡ್ ಮಾಡುವ ಅಗತ್ಯವಿಲ್ಲದೇ ಸಾಮಾಜಿಕ ತಾಣಗಳ ಮೂಲಕ ನೇರವಾಗಿ ಪ್ರಿಂಟ್ ಗೆ ಕಳಿಸುವ ಕೊಡಾಕ್ ಸಂಸ್ಥೆಯ ಈ ವ್ಯವಸ್ಥೆಯನ್ನು ಬಹಳಷ್ಟು ಗ್ರಾಹಕರು ಮೆಚ್ಚಿಕೊಂಡಿದ್ದು ಇದು ಅತ್ಯಂತ ಜನಪ್ರಿಯವಾಗುವುದರಲ್ಲಿ ಸಂದೇಹವೇ ಇಲ್ಲ. ಹೀಗಿದೆ ನೋಡಿ ತಂತ್ರಜ್ಞಾನದ ಮಹಿಮೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+