ಮದ್ಯದ ದಾಸರಾಗ ಬೇಡಿ; ಮರೆಗುಳಿತನಕ್ಕೆ ತುತ್ತಾಗಬೇಕಾದೀತು
ವಾಷಿಂಗ್ಟನ್,
ಜು 12: ಮದ್ಯದ ಹ್ಯಾಂಗೋವರ್ ಬಲು ಅಪಾಯ. ರಾತ್ರಿ ಮದ್ಯಸೇವಿಸಿ, ಸುಖ ನಿದ್ರೆಯ ನಂತರ ಬೆಳಿಗ್ಗೆ ಏನೋ ಒಂದು ಬಗೆಯ ಮರೆಗುಳಿತನ ಕಾಡುತ್ತಿದೆ ಎಂದರೆ ಅದಕ್ಕೆ ಅತಿಯಾದ ಮದ್ಯಸೇವನೆಯೇ ಕಾರಣ ಎಂದು ವಿಜ್ಞಾನಿಗಳು ಹೇಳುತ್ತಾರೆ. id="toptextpromo">ಮದ್ಯಸೇವನೆ
ಮೆದುಳಿನ ಜೀವಕೋಶಗಳನ್ನು ನಾಶಪಡಿಸುತ್ತವೆ ಎನ್ನಲಾಗುತ್ತಿತ್ತು. 'ಮದ್ಯ ಸೇವನೆಯಿಂದ ಮೆದುಳಿನ ಕೋಶಗಳು ನಾಶವಾಗುವುದಿಲ್ಲ. ಬದಲಿಗೆ ಮೆದುಳಿನಲ್ಲಿ ಉತ್ಪತ್ತಿಯಾಗುವ ಸ್ಟಿರಾಯ್ಡನಿಂದಾಗಿ ಹಳೆಯ ನೆನಪುಗಳು ನೆನಪಾಗದಂತೆ ತಡೆಹಿಡಿಯಲಾಗುತ್ತದೆ' ಎಂದು ಸಂಶೋಧನೆ ನಡೆಸುತ್ತಿರುವ ಸೈಂಟ್ ಲೂಯಿಸ್‌ನ ವೈದ್ಯಕೀಯ ವಿಶ್ವವಿದ್ಯಾಲಯ ಸಂಶೋಧಕ ಚಾರ್ಲ್ಸ್ ಝೊರುಮ್ಸ್ಕಿ ಹೇಳುತ್ತಾರೆ. id='are-slot-1' class='oiad oi-axt oiadv'> id='top-searched-articles'>ಇದನ್ನು
ಅರಿಯಲು ಇಲಿಗಳ ಮೇಲೆ ಸಂಶೋಧನೆ ನಡೆಸಲಾಯಿತು. ಇಲಿಗಳ ಮೆದುಳಿಗೆ ಅಗತ್ಯಕ್ಕಿಂತ ಹೆಚ್ಚು ಆಲ್ಕೊಹಾಲ್ ನೀಡಲಾಯಿತು. ಆ ಸಂದರ್ಭದಲ್ಲೂ ಜೀವಕೋಶಗಳು ಹಾನಿಯಾಗದ್ದು ಪತ್ತೆಯಾಗಿದೆ. ಆದರೆ ಆಲ್ಕೋಹಾಲ್ ಮೆದುಳಿಗೆ ಸೇರಿದ ನಂತರ ಅಲ್ಲಿನ ಜೀವಕೋಶಗಳು ಸ್ಟಿರಾಯ್ಡ್ ಉತ್ಪತ್ತಿಯನ್ನು ಹೆಚ್ಚಿಸಿತು. ಇದರಿಂದ ದೀರ್ಘಕಾಲದ ನೆನಪುಗಳು ನಾಶವಾಗಿದ್ದು ಸಂಶೋಧನೆಯಿಂದ ಗೊತ್ತಾಗಿದೆ ಎಂದು ಅವರು ಹೇಳುತ್ತಾರೆ











Click it and Unblock the Notifications