ಒಬ್ಬಳ ಮೇಲೆ 100ಜನ ಕಾಮ, 60ಕೀಚಕರು ಬಲೆಗೆ

Paravur Sex Scandal update
ಕೊಚ್ಚಿ ಜು 11: 14ರ ಹರೆಯ ಬಾಲೆ ಮೇಲೆ 70 ವರ್ಷದ ಮುದಿ ಕಾಮುಕ ನೇವಿ ಅಧಿಕಾರಿ ಸೇರಿದಂತೆ ಸುಮಾರು 100 ಜನಕ್ಕೂ ಅಧಿಕ ಜನ ಕಾಮದಾಹ ಪ್ರಕರಣ ಕುಂಟುತ್ತಾ ಸಾಗಿದೆ. ಪೊಲೀಸರಿಗೆ ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಊಮನ್ ಚಾಂಡಿ ಫುಲ್ ಪವರ್ ನೀಡಿದ್ದಾರೆ. ಪರವೂರ್ ಸೆಕ್ಸ್ ಕೇಸ್ ನಲ್ಲಿ ಈವರೆಗು 60 ಜನರ ಮೇಲೆ ಮಾತ್ರ ಚಾರ್ಜ್ ಶೀಟ್ ಹಾಕಲಾಗಿದೆ. ಉಳಿದವರು ಪ್ರಭಾವಿ ವ್ಯಕ್ತಿಗಳಾಗಿರುವುದರಿಂದ ಕೇಸ್ ವಿಳಂಬವಾಗುತ್ತಿದೆ ಎಂದು ಕೇರಳ ಕ್ರೈಂ ವಿಭಾಗ ಹೇಳಿಕೊಂಡಿದೆ.

ಎರಡು ವರ್ಷಗಳ ಕಾಲ ಸುಮಾರು 100 ಜನರ ಕಾಮತೃಷೆಗೆ ಬಲಿಯಾದ ಬಾಲೆ ಅಳುವ ಸಬ್ ಜೈಲಿನಲ್ಲಿ ಈಗಾಗಲೇ ಎಂಟು ಜನರನ್ನು ಗುರುತಿಸಿದ್ದಾಳೆ. ಸಿಪಿಐಎಂ ಮುಖಂಡ ಥಾಮಸ್ ವರ್ಗೀಸ್, ತಮಿಳುನಾಡು ಮೂಲದ ದಲ್ಲಾಳಿ ಮಣಿಕಂಠನ್, ಸರ್ಕಲ್ ಇನ್ಸ್ ಪೆಕ್ಟರ್ ಕೆಎಸ್ ಶಕ್ತಿವೇಲನ್, ನೊಬಿ, ಸ್ವರಾಜ್, ಉನ್ನಿಕೃಷ್ಣನ್, ಮನೋಜ್ ಗೋಪಿ, ಮುರುಗೇಶನ್ ಅಲ್ಲದೆ ರಾಜಶೇಖರನ್ ನಾಯರ್ ಎಂಬ ಮಾಜಿ ಯೋಧ ಕೂಡಾ ಸೇರಿದ್ದಾನೆ.

'ನನ್ನ ಮಗಳನ್ನು ವೇಶ್ಯಾವಾಟಿಕೆ ನನ್ನ ಗಂಡನೇ ದೂಡಿದ್ದಾನೆ. ಮಗಳು ಎಂಬ ಕನಿಕರವಿಲ್ಲದೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಆಮೇಲೆ ಗೆಳೆಯ ನೇವಿ ಅಧಿಕಾರಿ ಸೇರಿದಂತೆ ಇತರರಿಗೆ ಹಂಚಿದ್ದಾನೆ' ಎಂದು ಹುಡುಗಿಯ ತಾಯಿ ಪೊಲೀಸರ ಬಳಿಗೆ ಬಂದಾಗ, ದೇವರ ನಾಡು ಕೇರಳದ ಕಂಡು ಕೇಳಿರದಂಥ ಕಾಮ ಪ್ರಕರಣ ಬೆಳಕಿಗೆ ಬಂದಿತ್ತು.

ಮಲೆಯಾಳಂ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಹುಡುಗಿಯ ಅಪ್ಪ ತನ್ನ ಗೆಳೆಯರ ಜಾಲವನ್ನು ಬಳಸಿಕೊಂಡು ಮಗಳ ಮೈಮಾರಿ ಸಂಪಾದಿಸುತ್ತಿದ್ದ. ಅನೇಕ ಗಣ್ಯಾತಿಗಣ್ಯರು, ಸರ್ಕಾರಿ ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಹಲವರು ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಕೆಲವರು ನಾಪತ್ತೆಯಾಗಿದ್ದಾರೆ. ಎಲ್ಲರನ್ನು ಹುಡುಕಿ ಜೈಲಿಗೆ ಸೇರಿಸುತ್ತೇವೆ ಎಂದು ತನಿಖಾಧಿಕಾರಿ ಬಿ ಉನ್ನಿರಾಜ ಹೇಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+