ಸೆಕ್ಸ್ ಬೇಡವೆಂದ ಗಂಡ, ಜೈಲಿಗೆ ಹಾಕಿ ಎಂದ ಹೆಂಡತಿ

ಹರ್ರಿ ಕೌಂಟಿ ಪೊಲೀಸ್ ಇಲಾಖೆ ಜೂನ್ ತಿಂಗಳಲ್ಲಿ ಒಂದು ದಿನ ಬೆಳಗ್ಗೆ 911ರ ಕರೆ ಸ್ವೀಕರಿಸಿದಾಗ, ಹೆಂಗಸೊಬ್ಬಳು ಮಾತನಾಡಿ ಗಂಡ ಸೆಕ್ಸ್‌ಗೆ ತಿರಸ್ಕರಿಸುತ್ತಿದ್ದಾನೆ, ಅದಕ್ಕೆ ಆತನನ್ನು ಜೈಲಿಗೆ ಹಾಕಿ ನಾಲ್ಕು ಬಾರಿಸಬೇಕು ಎಂದು
ಬೇಡಿಕೊಂಡಿದ್ದಾಳೆ.
"ನಾನು ಇಂದು ಬೆಳಗ್ಗೆ ಆತನಿಗೆ ಹೊಡೆದೆ. ಏಕೆಂದರೆ ಆತ ನನ್ನೊಂದಿಗೆ ಸೆಕ್ಸ್ ಮಾಡಲು ವಿರೋಧಿಸಿದ್ದ ಅಲ್ಲದೆ ಕಳೆದ ಎರಡು ತಿಂಗಳಿಂದ ಆತ ನನ್ನೊಂದಿಗೆ ಸೆಕ್ಸ್ ಸಂಬಂಧ ಮಾಡಿಯೇ ಇಲ್ಲ. ಯಾವಾಗಲೂ ಫೋನ್ ನಲ್ಲಿ ಬ್ಯುಸಿ ಇರುತ್ತಾನೆ. ಅದಕ್ಕೆ ನಾನು ಅವನ ಕೆನ್ನೆಗೆ ನಾಲ್ಕು ಬಾರಿಸಿದೆ. ಇದರಿಂದ ಕೋಪಗೊಂಡ ಆತ ನನ್ನ ವಿರುದ್ಧ ಪೊಲೀಸ್ ದೂರು ನೀಡಿ ಜೈಲಿಗೆ ಹಾಕಿಸುತ್ತೇನೆ ಎಂದು ಹೇಳಿದ ಎಂದು ಮಹಿಳೆ ತನ್ನ ಪತಿಯ ಬಗ್ಗೆ ಪೊಲೀಸ್ ಅಧಿಕಾರಿಯೊಂದಿಗೆ ದೂರಿದ್ದಾಳೆ.
ಈ ಪ್ರಕರಣದ ಬಗ್ಗೆ ಆಕೆ ಗಂಡನನ್ನು ಪೊಲೀಸರು ಪ್ರಶ್ನಿಸಿದಾಗ, "ನನ್ನ ಹೆಂಡತಿಯೊಂದಿಗೆ ಅಂತಹ ಜಗಳವೇನೂ ನಡೆದಿಲ್ಲ, ಅವಳು ನನ್ನ ಜೈಲಿಗೆ ಹಾಕಿಸಬೇಕು ಎಂದು ಇಷ್ಟಪಟ್ಟಿದ್ದಾಳೆ. ಕಾರಣ ಗೊತ್ತಿಲ್ಲ" ಎಂದಿದ್ದಾನೆ. ಕೊನೆಗೆ ಪೊಲೀಸರು ಇಬ್ಬರಿಗೂ ಬುದ್ಧಿವಾದ ಹೇಳಿ ಕಳಿಸಿದ್ದಾರೆ. ಎಮರ್ಜೆನ್ಸಿ ಕಾಲ್ ದುರ್ಬಳಕೆ ಬಗ್ಗೆ ಎಚ್ಚರಿಕೆಯನ್ನು ನೀಡಲಾಗಿದೆ. ಪತಿ, ಪತ್ನಿಯರ ಹೆಸರು, ವಿಳಾಸ, ಸಂಖ್ಯೆಗಳನ್ನು ಅಳಿಸಿದ ಸಂಪೂರ್ಣ ಧ್ವನಿಮುದ್ರಿಕೆಯನ್ನು ಡಬ್ಲ್ಯೂಎಂಬಿಎಫ್ ನ್ಯೂಸ್ ವರದಿ ಮಾಡಿದೆ.












Click it and Unblock the Notifications