ಕಾಂಗೋ ವಿಮಾನ ದುರಂತ, 46 ಮಂದಿ ದುರ್ಮರಣ
ಕಾಂಗೋ,
ಜು. 9: ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ನ 'ಕಾಂಗೋ'ದಲ್ಲಿ ಶುಕ್ರವಾರ (ಜು.8)118 ಪ್ರಯಾಣಿಕರಿದ್ದ ವಿಮಾನ ಅಪಘಾತಕ್ಕೀಡಾಗಿ 46 ಜನ ಧಾರುಣವಾಗಿ ಸಾವಿಗೀಡಾಗಿದ್ದಾರೆ. ಧಾರಾಕಾರವಾಗಿ ಮಳೆ ಸುರಿಯುತ್ತಿದ್ದ ವೇಳೆ 'ಹೇವಾ ಬೋರಾ' ಕಂಪೆನಿಗೆ ಸೇರಿದ ಈ ವಿಮಾನ ಕಾಂಗೋ ದೇಶದ ಉತ್ತರ ಭಾಗದಲ್ಲಿರುವ 'ಕಿಸಂಗನಿ' ಎಂಬಲ್ಲಿ ಭೂ ಸ್ಪರ್ಶ ಮಾಡವ ಪ್ರಯತ್ನದಲ್ಲಿದ್ದಾಗ ಈ ಅಪಘಾತ ಸಂಭವಿಸಿದೆ. id="toptextpromo">ಹೇವಾ
ಬೋರಾ ಅಧ್ಯಕ್ಷ ಸ್ಟಾವ್ ರೋಸ್ ಪಪಾಯೊಅನ್ನೊ ಈ ಅಪಘಾತವನ್ನು ಧೃಡೀಕರಿಸಿದ್ದು " ಇಲ್ಲಿಯವರೆಗೆ 44 ಶವಗಳು ದೊರೆತಿವೆ. ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ 2 ಜನ ಮೃತಪಟ್ಟಿದ್ದು 53 ಜನ ಸುರಕ್ಷಿತವಾಗಿದ್ದಾರೆ" ಎಂಬ ಮಾಹಿತಿ ನೀಡಿದ್ದಾರೆ. ಆದರೆ ಉಳಿದ 19 ಮಂದಿಯ ಬಗ್ಗೆ ಯಾವ ಮಾಹಿತಿಯೂ ದೊರೆತಿಲ್ಲ. id='are-slot-1' class='oiad oi-axt oiadv'> id='top-searched-articles'>ಸಂಚಾರ
ಮುಗಿಸಿ ವಿಮಾನ ನಿಲ್ದಾಣಕ್ಕೆ ವಾಪಸ್ಸಾಗುತ್ತಿದ್ದ ವೇಳೆ, ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಹಾಗೂ ಭೀಕರ ಬಿರುಗಾಳಿಗೆ ವಿಮಾನ ತುತ್ತಾಗಿರುವುದನ್ನು ಕೂಡ ಉಲ್ಲೇಖಿಸಿರುವ ಅವರು ಕೆಟ್ಟ ಹವಾಮಾನದಿಂದಾಗಿ ರನ್ ವೇಗಿಂತ ಮೊದಲೇ ವಿಮಾನವನ್ನು ಲ್ಯಾಂಡ್ ಮಾಡಬೇಕಾದ ಪರಿಸ್ಥಿತಿಯಲ್ಲಿ ಈ ಅವಘಡ ಸಂಭವಿಸಿದೆ ಎಂದಿದ್ದಾರೆ. ರನ್ ವೇಯ ತುದಿಯಲ್ಲಿ ದಟ್ಟವಾದ ಕಪ್ಪು ಹೊಗೆ ಆವರಿಸಿದ್ದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.











Click it and Unblock the Notifications