ಸಾಫ್ಟ್‌ವೇರ್ ಉದ್ಯೋಗಿ ಶ್ವೇತಾ ಆತ್ಮಹತ್ಯೆಗೆ ಶರಣು

Techie Shwetha commits-suicide
ಬೆಂಗಳೂರು, ಜು.9: ಸಾಫ್ಟ್‌ವೇರ್ ಕಂಪನಿಯೊಂದರ ಉದ್ಯೋಗಿ ಮುಂಬೈ ಮೂಲದ ಶ್ವೇತಾ (26) ಎಂಬುವವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಉತ್ತರಹಳ್ಳಿ ಮುಖ್ಯರಸ್ತೆಯ ಬೃಂದಾವನ ರೆನೆಜಾನ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಶ್ವೇತಾ ವಾಸವಾಗಿದ್ದರು.

ಬಿ.ಎಸ್ಸಿ ಪದವೀಧರೆಯಾದ ಈಕೆ ಮುರುಗೇಶ್ ಪಾಳ್ಯದಲ್ಲಿರುವ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈಕೆಯ ತಂದೆ ರವಿಶಂಕರ್ ಮುಂಬೈನಲ್ಲಿದ್ದು ಸಹೋದರಿ ಶಿಲ್ಪಾ ಅಮೆರಿಕಾದಲ್ಲಿದ್ದಾರೆ. ಬೆಂಗಳೂರಿನಲ್ಲಿ ಶ್ವೇತಾ ಒಬ್ಬರೇ ವಾಸವಾಗಿದ್ದರು.

ಜುಲೈ 1ರಂದು ಶ್ವೇತಾ ಕೆಲಸಕ್ಕೆ ಹೋಗಿದ್ದರು. ಶನಿವಾರ (ಜು.2) ಮತ್ತು ಭಾನುವಾರ (ಜು.3) ರಜೆಯಿದ್ದ ಕಾರಣ ಆಕೆಯ ಮನೆಯಲ್ಲೇ ಇದ್ದರು. ಸೋಮವಾರ (ಜು.4) ಕೂಡ ಆಕೆ ಕೆಲಸಕ್ಕೆ ಹೋಗಿರಲಿಲ್ಲ. ಸ್ನೇಹಿತರು ಆಕೆಯ ಮೊಬೈಲ್‌ಗೆ ಕರೆ ಮಾಡಿದಾಗಲೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಕಡೆಗೆ ಅನುಮಾನಗೊಂಡ ಆಕೆಯ ಗೆಳತಿ ಜೆನ್ನಿಫರ್ ಎಂಬುವವರು ಜು.4ರಂದು ಪೊಲೀಸರಿಗೆ ದೂರು ನೀಡಿದರು. ಶ್ವೇತಾ ವಾಸವಿದ್ದ ಅಪಾರ್ಟ್‌ಮೆಂಟ್‌ಬಾಗಿಲು ಒಡೆದು ನೋಡಿದಾಗ ಆಕೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ಗೊತ್ತಿಲ್ಲದಿದ್ದರೂ, ಮುಂಬೈನ ಯುವಕನೊಬ್ಬನನ್ನು ಶ್ವೇತಾ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+