ಕೂಲ್ ಕ್ಯಾಪ್ಟನ್ ಎಂಎಸ್ ಧೋನಿಗೆ ಶುಭ ಹಾರೈಕೆ

MS Dhoni turns 30
ಡೊಮಿನಿಕಾ ಜು 6: ಟೀಂ ಇಂಡಿಯಾವನ್ನು ಇಂದು ಕ್ರಿಕೆಟ್ ಜಗತ್ತಿನ ಅಗ್ರಗಣ್ಯ ಸ್ಥಾನದಲ್ಲಿ ಎಲ್ಲರೂ ನೋಡುತ್ತಿದ್ದರೆ ಅದಕ್ಕೆ ಎಂಎಸ್ ಧೋನಿ ನಾಯಕತ್ವ ಕಾರಣ. ರಾಂಚಿಯ ಈ ಹುಡುಗ ಇಂದು ವಿಶ್ವದ ಅತ್ಯಂತ ಸಮರ್ಥ ಲೀಡರ್ ಆಗಿದ್ದಾನೆ. ಹೌದು, ತಾಳ್ಮೆ ಜಾಣ್ಮೆ ಯ ಪ್ರತೀಕವಾದ ಧೋನಿ ಮುಂದಿನ ಪೀಳಿಗೆಗೆ ರೋಲ್ ಮಾಡೆಲ್ ಆಗಿದ್ದಾರೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಡೊಮಿನಿಕಾದಲ್ಲಿ ನಡೆದಿರುವ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದ ಎರಡನೇ ದಿನ ಧೋನಿ ತಮ್ಮಹುಟ್ಟುಹಬ್ಬ ಆಚರಿಸಿಕೊಂಡರು. ಸಹ ಆಟಗಾರರೊಡನೆ ಕೇಕ್ ಕತ್ತರಿಸುವ ಮೂಲಕ 30ನೇ ವಸಂತಕ್ಕೆ ಕಾಲಿಟ್ಟ ಸಂಭ್ರಮ ಅನುಭವಿಸಿದರು. ಕಳೆದ ಕೆಲ ದಿನಗಳ ಹಿಂದೆ ಧೋನಿ ಸಾಕ್ಷಿ ತಮ್ಮ ಪ್ರಥಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.[ಧೋನಿ ಜೀವನಗಾಥೆ ಓದಿ]

2007ರಲ್ಲಿ ಭಾರತ ತಂಡದ ಚುಕ್ಕಾಣಿ ಹಿಡಿದ ಧೋನಿ, ಆ ವರ್ಷವೇ ಚೊಚ್ಚಲ ಟಿ 20 ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಪಟ್ಟ ಗಳಿಸಿದರು. ಏಕದಿನ ಪಂದ್ಯಗಳಲ್ಲಿ ಅಗ್ರಸ್ಥಾನಕ್ಕೇರಿದ ಟೀಂ ಇಂಡಿಯಾ, 28 ವರ್ಷಗಳ ನಂತರ ವಿಶ್ವಕಪ್ ವಿಜೇತರಾಗಿದ್ದು ಒಂದು ದಂತಕಥೆಯಂತೆ ನಡೆದು ಹೋಗಿದೆ. ಟೆಸ್ಟ್ ಶ್ರೇಯಾಂಕದಲ್ಲೂ ಅಗ್ರಸ್ಥಾನದಲ್ಲಿ ಭಾರತ ನಿಂತಿದೆ. ಸಿಬಿ ಸೀರಿಸ್ 2007–08, ಬಾರ್ಡರ್ ಗವಾಸ್ಕರ್ ಟ್ರೋಫಿ 2008, 2010 ಹಾಗೂ ಐಪಿಎಲ್ ನಲ್ಲಿ ಚೆನ್ನೈಗೆ ಸತತ ಪ್ರಶಸ್ತಿ ಸಿಗುವಂತೆ ಮಾಡಿದ ಚಾಣಾಕ್ಷ.

ಹಿರಿಯ ಕಿರಿಯ ಆಟಗಾರರ ನಡುವೆ ಸಾಮರಸ್ಯ ಬೆಳೆಸಿರುವುದು, ತನಗೆ ಬೇಕಾದ ಆಟಗಾರರನ್ನು ಹಟ ಮಾಡಿ ಪಡೆದಿರುವುದು, ಯಾರು ಯೋಚಿಸದ ರೀತಿಯಲ್ಲಿ ತಂಡದಲ್ಲಿ ಬದಲಾವಣೆ ತಂದಿರುವುದು, ಎಂಥ ಒತ್ತಡದ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದಿರುವುದು ಧೋನಿಯ ಅನುಕರಣೀಯ ಲಕ್ಷಣಗಳು.

ಕೂಲ್ ಕ್ಯಾಪ್ಟನ್ ಧೋನಿ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ಇಂದು ಜಾಹೀರಾತು ಪ್ರಪಂಚದಲ್ಲೂ ಧೋನಿ ಕುಬೇರ ನಾಗಿದ್ದಾನೆ. ಧೋನಿ ಯಶಸ್ಸು ಹೀಗೆ ಮುಂದುವರೆಯಲಿ. ವೆಸ್ಟ್ ಇಂಡೀಸ್ ಸರಣಿ ನಂತರ ಇಂಗ್ಲೆಂಡ್ ನಲ್ಲಿ ಕಠಿಣ ಸವಾಲು ಎದುರಿಸಲು ಸಜ್ಜಾಗಿರುವ ಧೋನಿಗೆ ಶುಭ ಹಾರೈಕೆಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+