ಶಾಲೆ ನಮಾಜು: ಮುಸ್ಲಿಮರಿಗೆ ಜಯ, ಹಿಂದೂಗಳಿಗೆ ಸೋಲು

ಶಾಲೆಯಲ್ಲಿರುವ 400 ಮುಸ್ಲಿಂ ವಿದ್ಯಾರ್ಥಿಗಳಿಗೆ ಮಸೀದಿಯಿಂದ ವಿಶೇಷವಾಗಿ ಆಹ್ವಾನಿಸಲಾಗಿರುವ ಇಮಾಮ್ ಒಬ್ಬರು ಪ್ರತಿ ಶುಕ್ರವಾರ 40 ನಿಮಿಷಗಳ ಪ್ರಾರ್ಥನೆ ಮಾಡಿಸುತ್ತಾರೆ. ಇದನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿದ್ದವು.
ಆದರೆ, ಇದಕ್ಕೆ ಬೆಲೆ ಕೊಡದ ಆಡಳಿತ ಮಂಡಳಿ, ನಮಾಜ್ ವ್ಯವಸ್ಥೆ ಬಗ್ಗೆ ಪೋಷಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಎಲ್ಲೆಡೆ ಈ ವ್ಯವಸ್ಥೆಯಿದೆ. ಶಾಲಾ ಮಕ್ಕಳ ಹಾಜರಾತಿ ಮೇಲೂ ನಾವು ಕಣ್ಣಿಡಬೇಕಿದೆ. ಎಂದು ಟಿಡಿಎಸ್‌ಬಿ ಹೇಳಿದೆ. ಈ ಶಾಲೆಯಲ್ಲಿ ಶೇ 90 ವಿದ್ಯಾರ್ಥಿಗಳು ಮುಸ್ಲಿಂಗಳಾಗಿರುವುದು ವಿಶೇಷ.
ಜಾತ್ಯತೀತವಾಗಿ ಶಿಕ್ಷಣ ನೀಡುವುದು ಶಾಲೆಯ ಜವಾಬ್ದಾರಿಯಾಗಿದೆ. ಟಿಡಿಎಸ್‌ಬಿ ಶಾಲೆಗಳಲ್ಲಿ ಹಲಾಲ್ (ಮುಸ್ಲಿಂ ಧರ್ಮದ ಪ್ರಕಾರ ವಧೆ ಮಾಡಲಾದ ಪ್ರಾಣಿಯ ಮಾಂಸ ) ಮಾಂಸವನ್ನು ನೀಡುತ್ತಿರುವುದು ಸರಿಯಲ್ಲ. ಎಲ್ಲ ಹಿಂದೂ ವಿದ್ಯಾರ್ಥಿಗಳಿಗೂ ಹಲಾಲ್ ಮಾಡದ ಮಾಂಸವನ್ನು ನೀಡುವುದಾಗಿ ಶಾಲೆ ಭರವಸೆ ನೀಡಬೇಕು ಎಂದು ಹಿಂದೂ ಸಂಘಟನೆ ಮುಖ್ಯಸ್ಥ ರಾನ್ ಬ್ಯಾನರ್ಜಿ ಹೇಳಿದ್ದಾರೆ.












Click it and Unblock the Notifications