ನಕಲಿ ಫೇಸ್ ಬುಕ್ ಪ್ರೊಫೈಲ್ ಸೃಷ್ಟಿ, ಅಳುತ್ತಾ ಕೂತಳು ಪುಟ್ಟಿ

ಮಣಿಪಾಲದ ಮಾಂಡವಿ ಪರ್ಲ್ ಸಿಟಿಯಲ್ಲಿ ವಾಸವಾಗಿರುವ ನಿಮ್ರಾ ಅಸ್ವಿನ್ ಎಂಬ ಯುವತಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕುಳಿತು ತನ್ನ ಹೆಸರು ಕೆಡಸುತ್ತಿರುವವರನ್ನು ಹಿಡಿದು ಶಿಕ್ಷಿಸುವಂತೆ ಕೇಳುತ್ತಿದ್ದಳು. ಬ್ಲಾಗ್, ಫೇಸ್ ಬುಕ್ ಬಗ್ಗೆ ಅಲ್ವಸ್ವಲ್ಪವಾದರೂ ತಿಳಿದಿರುವ ಉಡುಪಿ ಪೊಲೀಸರು ಆಕೆಯನ್ನು ಸಮಾಧಾನಪಡಿಸಿ, ದೂರು ದಾಖಲಿಸಿಕೊಂಡು ಕಳಿಸಿದ್ದಾರೆ.
ನನಗೆ ಅರಿವಿಲ್ಲದಂತೆ ನನ್ನ ಫೋಟೋ ಹಾಗೂ ಇಮೇಲ್ ಮಾಹಿತಿ ಬಳಸಿ, ಫೇಸ್ ಬುಕ್ ನಲ್ಲಿ ಪ್ರೊಫೈಲ್ ಮಾಡಿದ್ದಾರೆ. ಬಳಿಕ ಸುಮಾರು 51 ಮಂದಿ ಗೆಳೆಯರನ್ನು ಜೋಡಿಸಿ ಎಲ್ಲರ ಜೊತೆಗೂ ಚಾಟಿಂಗ್ ಮಾಡಲಾಗಿದೆ. ಚಾಟಿಂಗ್ ನಲ್ಲಿ ಕೊಳಕು ಸಂಭಾಷಣೆ ನಡೆದಿರುವ ಸಾಧ್ಯತೆಯಿದೆ. ನನಗೆ ಕೊಳಕು ಸಂದೇಶಗಳಿಂದ ಮುಕ್ತಿ ಕೊಡಿಸಿ ಎಂದು ಟಿ.ಎಂ ರಹಮತುಲ್ಲಾ ಅವರ ಮಗಳು ನಿಮ್ರಾ ಅನ್ವಿಸ್ ದೂರು ನೀಡಿದ್ದಾರೆ.
ಅಪರಿಚಿತ ಆರೋಪಿಯ ವಿರುದ್ದ ಅಪರಾಧ ಕ್ರಮಾಂಕ 146/11 ಕಲಂ 66 ಎಐಟಿ ಕಾಯ್ದೆಯಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದ್ದು, ದುಷ್ಕರ್ಮಿಗಳ ಹುಡುಕಾಟ ಜಾರಿಯಲ್ಲಿದೆ. [ಫೇಸ್ ಬುಕ್ ಗೆಳೆಯರಿಗೆ ಜನ್ಮದಿನ ಶುಭಾಶಯ ಹೇಳಿ]












Click it and Unblock the Notifications