ಪಾಪ, ಬಿಎಂಟಿಸಿ ತನಿಖಾಧಿಕಾರಿಗಳಿಗೆ ಐಡಿ ಕಾರ್ಡ್ ನೀಡಿ!

Provide BMTC inspectors ID badges
ಬೆಂಗಳೂರು, ಜುಲೈ 5: ನಾನು ಕಳೆದ ಮೂವತ್ತು ವರ್ಷಗಳಿಂದ ಬಿಟಿಎಸ್ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದೆ. ಈಗ ಅದರ ಹೆಸರು ಬಿಎಂಟಿಸಿ ಎಂದಾಗಿದೆ. ಬೆಂಗಳೂರು ಮೊದಲಿಗಿಂತಲೂ ಈಗ ಬೃಹತ್ ಆಗಿ ಬೆಳೆದಿದೆ. ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ಹೆಚ್ಚಿದೆ.

ನನ್ನ ಆಕ್ಷೇಪ ಏನೆಂದರೆ, ಅನೇಕ ಸಲ ಸಮವಸ್ತ್ರವಿಲ್ಲದ ಮತ್ತು ಗುರುತಿನ ಕಾರ್ಡೂ ಇಲ್ಲದ, ತನಿಖಾಧಿಕಾರಿಗಳೆಂದು ಹೇಳುವ ಸ್ತ್ರೀ ಮತ್ತು ಪುರುಷರು ಬಿಎಂಟಿಸಿ ಬಸ್‌ನೊಳಕ್ಕೆ ನುಗ್ಗಿ ತಮ್ಮದೇ ಸ್ವಂತ ಬಸ್ಸೆಂದು ಭಾವಿಸಿ, ಪ್ರಯಾಣಿಕರನ್ನು ತನಿಖೆ ಮಾಡುತ್ತಾರೆ. ನಾನು ಅನೇಕ ಸಾರಿ, ಸಮವಸ್ತ್ರವೂ ಇಲ್ಲದೆ, ಗುರುತಿನ ಕಾರ್ಡು ಇಲ್ಲದೆ ಪ್ರಯಾಣಿಕರನ್ನು ತನಿಖೆ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ವಾದಿಸಿದರೂ, ತಮ್ಮನ್ನೇ ಸಮರ್ಥಿಸಿಕೊಳ್ಳುತ್ತಾರೆ.

ಬಿಎಂಟಿಸಿ ಅಥವಾ ಇತರೇ ಸಾರ್ವಜನಿಕ ಬಸ್‌ಗಳಲ್ಲಿ ಯೂನಿಫಾರಂ ಇಲ್ಲದ, ಗುರ್ತಿನ ಕಾರ್ಡು ಕುತ್ತಿಗೆಗೆ ನೇತು ಹಾಕಿಕೊಂಡಿರದ ತನಿಖಾಧಿಕಾರಿಗಳು ತನಿಖೆ ಮಾಡಬಹುದೇ ಇಲ್ಲವೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟೀಕರಿಸಬೇಕು.

ಅಲ್ಲದೆ, ಟಿಕೇಟು ರಹಿತ ಪ್ರಯಾಣ ಮಾಡಬಾರದೆಂಬ ಬಗ್ಗೆ ಪ್ರತಿ ನಿಲ್ದಾಣದಲ್ಲಿಯೂ ಪ್ರತಿ ದಿನ ಪ್ರಸಾರ ಮಾಡಿ ಜನಜಾಗೃತಿ ಮೂಡಿಸಬೇಕೆಂದು ಸಂಬಂಧಪಟ್ಟವರಲ್ಲಿ ವಿನಂತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+