ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವಸ್ಥಾನದ ಕೋಟಿ ಆಸ್ತಿ ಲೂಟಿ : ಅರ್ಚಕ ಕಣ್ಣೀರು

By * ದಟ್ಸ್ ಕನ್ನಡ ವರದಿ
|
Google Oneindia Kannada News

Shaktibala, Naga Durgeshwari temple priest
ಬೆಂಗಳೂರು, ಜು. 5 : ದೊಡ್ಡ ಆಲದ ಮರದ ಸಮೀಪವಿರುವ ನಾಗ ದುರ್ಗೇಶ್ವರಿ ದೇವಾಲಯಕ್ಕೆ ಸೇರಿದ 1 ಕೋಟಿ ರು.ಗೂ ಹೆಚ್ಚು ಬೆಲೆಬಾಳುವ ಚಿನ್ನಾಭರಣ, ದೇವತೆಯ ರೇಶ್ಮೆ ವಸ್ತ್ರಗಳು, 2 ಕಾಣಿಕೆ ಹುಂಡಿಗಳನ್ನೆಲ್ಲ ಬೆಂಗಳೂರು ಗ್ರಾಮಾಂತರ ತಹಶೀಲ್ದಾರ್ ಸಿ ಮಂಜುನಾಥ್ ಮತ್ತು ಅಧಿಕಾರಿಗಳು ದೋಚಿದ್ದಾರೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಶಕ್ತಿಬಾಲಾ ಆರೋಪಿಸಿದ್ದಾರೆ.

ದೇವಸ್ಥಾನ ಸ್ಥಳ ಗೋಮಾಳದ ಜಾಗವಾಗಿದ್ದು, ಸರಕಾರಕ್ಕೆ ಸೇರಿದೆ ಎಂಬ ನೆಪವೊಡ್ಡಿ ದೇವಸ್ಥಾನವನ್ನು ಸಂಪೂರ್ಣ ನಾಶ ಮಾಡಲಾಗಿದೆ. ಕೊಳದ ಮಠದ ಸ್ವಾಮೀಜಿ ಮಧ್ಯಸ್ಥಿಕೆಯಿಂದ ಗರ್ಭಗುಡಿ ಮಾತ್ರ ಉಳಿದುಕೊಂಡಿದೆ. ಇದರಿಂದ 5 ಕೋಟಿ ರು.ನಷ್ಟು ಆಸ್ತಿಪಾಸ್ತಿಗೆ ಭ್ರಷ್ಟ ಅಧಿಕಾರಿಯಿಂದ ಹಾನಿಯಾಗಿದೆ. ಮುಖ್ಯಮಂತ್ರಿಗಳೇ ಇದಕ್ಕೆ ಪರಿಹಾರ ದೊರಕಿಸಿಕೊಡಬೇಕು ಎಂದು ಅವರು ನುಡಿದರು.

ಸುದ್ದಿಗಾರರನ್ನು ಉದ್ದೇಶಿಸಿ ತಮ್ಮ ಗೋಳನ್ನು ಹಂಚಿಕೊಂಡ ದೇವಸ್ಥಾನದ ಪ್ರಧಾನ ಅರ್ಚಕ ಮತ್ತು ವ್ಯವಸ್ಥಾಪಕ ಟ್ರಸ್ಟಿ ಶಕ್ತಿಬಾಬಾ ಅವರು ಕಷ್ಟನಷ್ಟಗಳನ್ನು ನೆನೆದು ಕಣ್ಣೀರು ಸುರಿಸಿದರು. ದೇವಾಲಯದ ಜಮೀನು ಗೋಮಾಳವಾಗಿದೆ ಎಂದು ಸರಕಾರ ಹೇಳುತ್ತಿದೆ. ಇದರ ಹಿಂದೆ ಡಿಸಿ ಮತ್ತು ಜಮೀನು ಮಾರಿದ ವೇಣುಗೋಪಾಲ ಎಂಬಾತನ ಹುನ್ನಾರವಿದೆ ಎಂದು ಆರೋಪಿಸಿದರು.

ಇಷ್ಟು ಮಾತ್ರವಲ್ಲ, ದೇವಸ್ಥಾನ ತೆರವುಗೊಳಿಸುವಾಗ ಮಗುವಿನಂತೆ ಸಾಕಿದ್ದ ಗೋವನ್ನು ಹತ್ಯೆ ಕೂಡ ಮಾಡಿದ್ದಾರೆ. ಗೋಹತ್ಯೆ ಮಾಡಿದ ಈ ಹೆಗ್ಗಣಗಳನ್ನು ಮೊದಲಿಗೆ ಮನೆಗೆ ಕಳುಹಿಸಬೇಕು ಎಂದು ಶಕ್ತಿಬಾಲಾ ಆಕ್ರೋಶ ವ್ಯಕ್ತಪಡಿಸಿದರು. ದೇವಸ್ಥಾನ ಮೂರು ಅರ್ಚಕರನ್ನು ಹೊಂದಿದ್ದು, ಎಲ್ಲರೂ ಈಗ ನಿರುದ್ಯೋಗಿಗಳಾಗಿದ್ದಾರೆ. ನನ್ನಂಥವನಿಗೇ ಹೀಗೆ ಆದರೆ ಬಡವರ ಗತಿಯೇನು ಎಂದು ಶಕ್ತಿಬಾಲಾ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಕೊಳದ ಮಠದ ಡಾ. ಶಾಂತವೀರ ಸ್ವಾಮೀಜಿಯವರು, ಯಾವುದೇ ಪೂರ್ವಭಾವಿ ನೋಟೀಸ್ ಇಲ್ಲದೆ ನಡೆಸಿದ ಕಾರ್ಯಾಚರಣೆಯಿಂದ ದೇವಸ್ಥಾನದ ಆಸ್ತಿಪಾಸ್ತಿಗೆ ಭಾರೀ ಹಾನಿಯಾಗಿದ್ದು, ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿದೆ. ಕೂಡಲೆ ಮಂಜುನಾಥ್ ವಿರುದ್ಧ ಕ್ರಮ ಜರುಗಿಸಿ, ದೇವಸ್ಥಾನವನ್ನು ಮರುನಿರ್ಮಾಣ ಮಾಡಿಕೊಡದಿದ್ದರೆ ಭಕ್ತರು ಜು.6ರಂದು ಕೆಂಗೇರಿ ಬಳಿ ಮೈಸೂರು ರಸ್ತೆ ತಡೆ ಮಾಡಲಿದ್ದಾರೆ ಎಂದು ನುಡಿದರು. [ಈ ದಿನದ ಎಲ್ಲಾ ಲೇಖನಗಳು]

English summary
The Naga Durgeshwari temple devotees to stage protest near Kengeri on Mysore Road on 6 July. Reason : The temple authorities allege that The tahashildar of Bangalore Rural has demolished the temple and has taken away the riches of temple valued at 1 crore rupee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X