ಕಾಂಗ್ರೆಸ್ ನಾಯಕ ರೇಪ್ ಮಾಡಿ, ಎಂಎಂಎಸ್ ಹಂಚಿದ

ಯುವತಿ ಮೇಲೆ ಅತ್ಯಾಚಾರ ಎಸೆಗಿದ್ದಲ್ಲದೆ ಮದುವೆಯಾಗುವಂತೆ ಪೀಡಿಸುತ್ತಿದ್ದ. ಪ್ರಹ್ಲಾದ್ ನನ್ನು ಬಂಧಿಸಿರುವ ಪೊಲೀಸರು ಐಪಿಸಿ ಸೆಕ್ಷನ್ 376, 494, 501 ಹಾಗೂ 506 ಅನ್ವಯ ಕೇಸ್ ಜಡಿದಿದ್ದಾರೆ. ಕಳಿನಾ ಫೊರೆನ್ಸಿಕ್ ಲ್ಯಾಬ್ ನಲ್ಲಿ ಕಾಂಗ್ರೆಸ್ ನಾಯಕನ ಮೊಬೈಲ್ ಫೋನ್ ತಪಾಸಣೆ ನಡೆಸಲಾಗಿದೆ. ಪ್ರಹ್ಲಾದ್ ಮೊಬೈಲ್ ನಲ್ಲದ್ದ ಎಂಎಂಎಸ್ ಕ್ಲಿಪ್ ಗಳನ್ನು ಸಂಪೂರ್ಣವಾಗಿ ಅಳಿಸಿ ಹಾಕಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ.
ಚೆಂಬೂರು ಹಾಗೂ ಘಕೊಪರ್ ಮೂಲದ ಇಬ್ಬರು ಮಹಿಳೆಯರನ್ನು ಮದುವೆಯಾಗಿರುವ ಪ್ರಹ್ಲಾದ್, 19 ವರ್ಷ ಯುವತಿ ಮೇಲೆ ಕಣ್ಣು ಹಾಕಿದ್ದ, ಈತನ ಉಪಟಳ ತಾಳಲಾರದೆ ಯುವತಿಯ ತಾಯಿ ಪೊಲೀಸ್ ಆಯುಕ್ತ ಅರುಪ್ ಪಟ್ನಾಯಕ್ ಅವರ ಮೊರೆ ಹೋಗಿದ್ದಾರೆ.
ಪ್ರಹ್ಲಾದ್ ಈ ಮುಂಚೆ ಕೂಡಾ ಒಂದು ಕೊಲೆ ಕೇಸ್ ನಲ್ಲಿ ಫಿಟ್ ಆಗಿದ್ದ ಎಂದು ಪೊಲೀಸ್ ದಾಖಲೆಗಳು ಹೇಳುತ್ತವೆ. ಕ್ರಿಮಿನಲ್ ಗೆ ಆಶ್ರಯ ನೀಡುವುದರಲ್ಲಿ ಕಾಂಗ್ರೆಸ್ ಪಕ್ಷ ಮಂಚೂಣಿಯಲ್ಲಿದೆ ಎಂಬ ಹಳೆ ಅಪವಾದಕ್ಕೆ ಈ ಕೇಸ್ ಕೂಡಾ ಹೊಸದಾಗಿ ಸೇರಿಕೊಂಡಿದೆ.












Click it and Unblock the Notifications