ಪೊಲೀಸರ ಮೇಲೆ ಮೊಲೆ ಹಾಲು ಸಿಂಪಡಿಸಿದ ಶಿಕ್ಷಕಿ ವಜಾ

ಕೌಟುಂಬಿಕ ಕಲಹ ಹಾಗೂ ಹಿಂಸೆಗೆ ಸಂಬಂಧಿಸಿದಂತೆ 30 ವರ್ಷದ ಓಹಿಯೊದ ನಿವಾಸಿ ಸ್ಟೆಪನಿ ರೊಬಿನೆಟ್ ಎಂಬುವವರನ್ನು ಬಂಧಿಸಲು ಪೊಲೀಸರು ಬಂದಿದ್ದು, ಇದನ್ನು ವಿರೋಧಿಸಿದ ಆಕೆ ತಕ್ಷಣವೆ ತನ್ನ ಬಟ್ಟೆ ಕಳಚಿ ಬಲ ಮೊಲೆಯಿಂದ ಹಾಲಿನ ಸಿಂಚನ ಮಾಡತೊಡಗಿದಳು.
ತಾನು ಮೊಲೆ ಹಾಲನ್ನು ಉಣಿಸುವ ತಾಯಿ ಎಂದು ಹೇಳುತ್ತಾ ಪೊಲೀಸರು ಮತ್ತು ಕಾರಿನ ಮೇಲೆ ಮೊಲೆ ಹಾಲಿನ ಸಿಂಚನ ಮಾಡಲು ಆರಂಭಿಸಿದಳು. ಆಕೆಯನ್ನು ಹಿಡಿಯಲು ಮುಜುಗರ ಪಟ್ಟ ಗಂಡು ಪೊಲೀಸ್ ಪೇದೆಗಳು, ಮಹಿಳಾ ಪೊಲೀಸರನ್ನು ಕರೆಸಿಕೊಂಡು ಪ್ರಯಾಸಪಟ್ಟು ಬಂಧಿಸಿದ್ದಾರೆ.
ಸ್ಪೆಪನಿ ಪತಿ ರೊಬಿನೆಟ್ ಹೇಳಿಕೆ: ಅವರಿಬ್ಬರು ಒಂದು ಮದುವೆ ಪಾರ್ಟಿಗೆ ತೆರಳಿದ್ದರು. ಅಲ್ಲಿ ಆಕೆ ಕಂಠಪೂರ್ತಿ ಕುಡಿದು ನಶೆ ಏರಿಸಿಕೊಂಡಿದ್ದಳು. ಇದರ ಬಳಿಕ ಜಗಳ ಮಾಡಲು ಆರಂಭಿಸಿದಳು. ಆಕೆ ತನ್ನ ಮೇಲೆ ಹಲ್ಲೆ ನಡೆಸಿದ ಬಳಿಕ ಕಾರಿನೊಳಗೆ ಲಾಕ್ ಮಾಡಿ ಕುಳಿತುಕೊಂಡಳು ಕೊನೆಗೆ ಪೊಲೀಸರಿಗೆ ಕರೆ ಮಾಡಿದೆ.
ಕುಟುಂಬ ಕಲಹ, ಹಲ್ಲೆ, ಅಧಿಕಾರಿಗಳ ನಿಂದನೆ, ಬಂಧನಕ್ಕೆ ಪ್ರತಿರೋಧ ಅನಾಗರೀಕ ವರ್ತನೆ ಮುಂತಾದ ಆರೋಪ ಎದುರಿಸುತ್ತಿರುವ ಸ್ಟೆಪನಿಯನ್ನು ಸಮ್ಮಿಟ್ ಅಕಾಡೆಮಿ ಕೆಲಸದಿಂದ ವಜಾಮಾಡಿದೆ. ಅಲ್ಲದೆ ಟೀಚರ್ ಲೈಸನ್ಸ್ ಅನ್ನು ಹಿಂದಕ್ಕೆ ಪಡೆಯುವಂತೆ ಡೆಲ್ ವೇರ್ ಪ್ರಾಂತ್ಯದ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದೆ.
ಆಶ್ ಲ್ಯಾಂಡ್ ವಿವಿಯಿಂದ ಮಾಸ್ಟರ್ ಡಿಗ್ರಿ ಪಡೆದಿರುವ ಸ್ಪೆಪನಿ, ಆಟಿಸಂ ಪೀಡಿತ ಮಕ್ಕಳು ಹಾಗೂ ಇತರೆ ಅಸ್ವಸ್ಥ ಮಕ್ಕಳಿಗೆ ಪಾಠ, ತರಬೇತಿ ನೀಡುವಲ್ಲಿ ನಿಷ್ಣಾತೆಯಾಗಿದ್ದಾರೆ.
;
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications