ಬೀದಿ ನಾಯಿಯಿಂದ ಪಾರಾದ ಬಾಲಕಿ ಟ್ರಕ್ಕಿನಡಿ ಸಾವು
ಬೆಂಗಳೂರು,
ಜುಲೈ 4: ಬೆನ್ನಟ್ಟಿ ಬಂದ ಬೀದಿ ನಾಯಿಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಬಾಲಕಿಯೊಬ್ಬಳು ಕಾಂಕ್ರಿಟ್ ಮಿಕ್ಸರ್ ಟ್ರಕ್ ಗೆ ಸಿಕ್ಕಿ ಸಾವನ್ನಪ್ಪಿದ ದಾರುಣ ಘಟನೆ ಬೆಳ್ಳಂದೂರು ಗೇಟ್ ಸಮೀಪದ ಅರಳೂರು ಬಳಿ ಭಾನುವಾರ ಬೆಳಗ್ಗೆ (ಜುಲೈ 3)ನಡೆದಿದೆ. id="toptextpromo">ಅರಳೂರು
ಸಮೀಪ ತಾತ್ಕಾಲಿಕ ಶೆಡ್‌ನಲ್ಲಿ ವಾಸವಿರುವ ಮಾಯಪ್ಪ ಎಂಬುವರ ಮಗಳು ಮಂಜಮ್ಮ (10) ಮೃತಪಟ್ಟ ಬಾಲಕಿ. ಮೂಲತಃ ಬಳ್ಳಾರಿಯ ಮಾಯಪ್ಪ, ಪತ್ನಿ ಮಲ್ಲಮ್ಮ ಕೂಲಿ ಕೆಲಸ ಮಾಡುತ್ತಾರೆ. id='are-slot-1' class='oiad oi-axt oiadv'> id='top-searched-articles'>ಶೆಡ್‌ನ
ಸಮೀಪವೇ ಇರುವ ಅಂಗಡಿಗೆ ಹೋಗುತ್ತಿದ್ದ ಮಂಜಮ್ಮಳನ್ನು ಬೀದಿ ನಾಯಿಯೊಂದು ಬೆನ್ನಟ್ಟಿ ಬಂತು. ಇದರಿಂದ ಆತಂಕಗೊಂಡ ಬಾಲಕಿ ಓಡಲು ಯತ್ನಿಸಿದಳು. ಅದೇ ವೇಳೆಗೆ ಎದುರಿನಿಂದ ವೇಗವಾಗಿ ಬಂದ ಟ್ರಕ್ ಅವಳ ಮೇಲೆ ಹರಿಯಿತು. ತೀವ್ರವಾಗಿ ಗಾಯಗೊಂಡ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದಳು. ಘಟನೆ ನಂತರ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಮಡಿವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











Click it and Unblock the Notifications