ಹಸಿರು ಅಂಕಣದ ವಿಂಬಲ್ಡನ್ ಬ್ಯೂಟಿ ಯಾರ ಪಾಲು?

ಈಗ ಅದೇ ಕಳವಳ ನಿಜವಾಗಿದೆ. ಹುಲ್ಲಿನಂಕಣದ ಮೇಲೆ ಸೆಂಟರ್ ಕೋರ್ಟ್ ನಲ್ಲಿ ವಿಂಬಲ್ಡನ್ ಪ್ರಶಸ್ತಿಗಾಗಿ ಡಿಫೆಂಡಿಂಗ್ ಚಾಂಪಿಯನ್ ನಡಾಲ್ ಮತ್ತು ಸೆರ್ಬಿಯಾದ ನೋವಾಕ್ 'ಜೋಕರ್' ಜೋಕೋವಿಕ್ ಸೆಣಸಾಡಲಿದ್ದಾರೆ. ನಡಾಲ್ ವಿಂಬಲ್ಡನ್ ಪ್ರಶಸ್ತಿಯನ್ನು ಎರಡು ಬಾರಿ (2008 ಮತ್ತು 2010) ಗೆದ್ದಿದ್ದರೆ, ಜೋಕೋವಿಕ್ ಗೆದ್ದರೆ ಇದು ಪ್ರಥಮ ವಿಂಬಂಲ್ಡನ್ ಪ್ರಶಸ್ತಿಯಾಗಲಿದೆ. ಪಂದ್ಯ ಭಾನುವಾರ, ಜು.3ರಂದು ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಆಟ ಲೈವ್ ನೋಡಿ ಆನಂದಿಸಿ.
1877ರಲ್ಲಿ ಪ್ರಾರಂಭವಾದ ಜೆಂಟಲ್ ಮನ್ಸ್ ಗೇಮ್ ಎಂದೇ ಜನಜನಿತವಾಗಿರುವ ಈ ಪ್ರಶಸ್ತಿಯನ್ನು ಗೆಲ್ಲುವುದು ಪ್ರತಿ ಟೆನ್ನಿಸ್ ಆಟಗಾರನ ಕನಸು. ಬೇಸ್ ಲೈನ್ ಆಟಗಾರರಿಗಿಂತ, ಬುದ್ಧಿ ಉಪಯೋಗಿಸಿ ಕಲಾತ್ಮಕವಾಗಿ ಆಡುವ ಆಟಗಾರರಿಗೆ ವಿಂಬಲ್ಡನ್ ಹೆಚ್ಚು ಒಲಿದಿದೆ. ತಮಾಷೆಯ ಸಂಗತಿಯೆಂದರೆ, ಇಂಗ್ಲೆಂಡ್ ನ ಒಬ್ಬ ಆಟಗಾರನಿಗೂ ಈ ಬ್ಯೂಟಿಯನ್ನು ಒಲಿಸಿಕೊಳ್ಳಲು ಸಾಧ್ಯವಾಗಿಲ್ಲ.
ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ ಭಾನುವಾರ ಜು.2ರಂದು ನಡೆಯಲಿರುವ ಚಾಂಪಿಯನ್ಶಿಪ್ ಪಂದ್ಯವನ್ನು ಜೋಕೋವಿಕ್ ಮೊದಲ ಬಾರಿಗೆ ತಲುಪಿದ್ದಾರೆ. ಸೆಮಿಫೈನಲ್ ನಲ್ಲಿ ಅವರು ಟ್ಸೋಂಗಾ ಅವರನ್ನು 7-6 (4), 6-2, 6-7 (9), 6-3 ಅಂತರದಿಂದ ಸೋಲಿಸಿದರು. ಇನ್ನೊಂದು ಪಂದ್ಯದಲ್ಲಿ ನಡಾಲ್, ಇಂಗ್ಲೆಂಡ್ ನ ಆಂಡಿ ಮರ್ರಿ ಅವರನ್ನು 5-7, 6-2, 6-2, 6-4 ಅಂತರದಿಂದ ಗೆದ್ದು ಮತ್ತೊಂದು ಪ್ರಶಸ್ತಿಗೆ ಕೈಚಾಚಿದ್ದಾರೆ.
ಆರು ಬಾರಿ ಈ ಪ್ರಶಸ್ತಿಯನ್ನು ಗೆದ್ದಿರುವ ರೋಜರ್ ಫೆಡರ್ ಅವರು 7 ಬಾರಿ ಗೆದ್ದಿರುವ ಪೀಟ್ ಸಾಂಪ್ರಾಸ್ ಅವರನ್ನು ಸರಿಗಟ್ಟಲು ಈ ಬಾರಿ ವಿಫಲರಾದರು. ಒಟ್ಟು 14 ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಫೆಡರರ್ ಅವರ ದಾಖಲೆಯ ಹತ್ತಿರ ಸಾಗಲು ನಡಾಲ್ ಅವರಿಗೆ ಇನ್ನೊಂದು ಅವಕಾಶ ಲಭಿಸಿದೆ. ಜೋಕೋವಿಕ್ ಮಾತ್ರ ಗೆದ್ದರೂ, ಗೆಲ್ಲದಿದ್ದರೂ ಫೈನಲ್ ತಲುಪಿದ್ದರಿಂದ ನಂ.1 ಟೆನ್ನಿಸ್ ಆಟಗಾರ ಆಗಲಿದ್ದಾರೆ.












Click it and Unblock the Notifications