ಅಮೆರಿಕದಲ್ಲಿ ಆಮೆಗಳ ದಾಳಿ: ಧರೆ ಕಚ್ಚಿದ ವಿಮಾನ ಸಂಚಾರ

ಏನಾಯಿತೆಂದರೆ, ಸುಮಾರು 150 ಆಮೆಗಳು ಕಡಲ ತೀರವನ್ನು ಅರಸುತ್ತಾ ಜೆಎಫ್‌ಕೆ ವಿಮಾನ ನಿಲ್ದಾಣದ ರನ್ ವೇ ಮೇಲೆ ತೆವಳಿ ಬಂದ ಸುಯೋಗದಿಂದಾಗಿ ವಿಮಾನಗಳ ಸಂಚಾರ ವಿಳಂಬವಾಯಿತು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಸಾವಿರಾರು ಆಸಕ್ತರು ಟ್ವಿಟರ್ ನಲ್ಲಿ ಮನಸೋಇಚ್ಛೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ
ಮೊಟ್ಟೆಗಳನ್ನು ಇಡಲು ಕಡಲ ತೀರ ಅರಸಿ ದಾರಿ ತಪ್ಪಿದ್ದ ಈ ಆಮೆಗಳ ಪಥಸಂಚಲನವು ರನ್ ವೇ ಯಲ್ಲಿ ಬೆಳಗ್ಗೆ 6.45ರ ವೇಳೆಗೆ ಆರಂಭವಾಯಿತು. ಒಂದು ರನ್‌ವೇ ಮತ್ತು ಟ್ಯಾಕ್ಸಿಗಳು ಸಾಗುವ ಪಕ್ಕದ ರಸ್ತೆಯಲ್ಲಿ ಒಮ್ಮೆಗೇ ಅನೇಕ ಆಮೆಗಳು ಕಾಣಿಸಿಕೊಂಡವು. ಈ ಕಾರಣ ಕೆಲ ವಿಮಾನಗಳು ಮತ್ತೊಂದು ರನ್‌ವೇಯಿಂದ ಹೊರಡಬೇಕಾಯಿತು ಎಂದು ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯ ಬಂದರು ಅಧಿಕಾರಿಗಳು ಹೇಳಿದ್ದಾರೆ.
ವಿಮಾನಗಳ ಹಾರಾಟದಲ್ಲಿ ಸುಮಾರು 30 ನಿಮಿಷಗಳ ವ್ಯತ್ಯಯ ಆಯಿತು. ಜೆಎಫ್‌ಕೆ ವಿಮಾನ ನಿಲ್ದಾಣವು ಕೊಲ್ಲಿ ಮತ್ತು ನೀರಿರುವ ಪ್ರದೇಶದಿಂದ ಸುತ್ತುವರಿದಿದೆ. ಆದ್ದರಿಂದ ಆಮೆಗಳು ಮೊಟ್ಟೆಯನ್ನಿಡಲು ಹನಿಮೂನ್ ಪ್ರವಾಸಕ್ಕಾಗಿ ವಿಮಾನ ನಿಲ್ದಾಣಕ್ಕೆ ಬರುವುದು ಇಲ್ಲಿಯ ವಾಡಿಕೆ. 2009ರಲ್ಲಿ ಸುಮಾರು 78 ಆಮೆಗಳು ರನ್‌ವೇ ಬಳಿ ಕಾಣಿಸಿಕೊಂಡಿದ್ದವು' ಎಂದು ಬಂದರು ವಕ್ತಾರ ರಾನ್ ಮ್ಯಾರಿಸ್ಕೊ ಹೇಳಿದ್ದಾರೆ.











Click it and Unblock the Notifications