ಚೀನಾದಲ್ಲಿ ಮತ್ತೊಂದು ಬುಲೆಟ್ ಘರ್ಜನೆ

Beijing-Shanghai bullet train on track
ಬೀಜಿಂಗ್ , ಜುಲೈ 1: ಚೀನಾದ ಬಹು ನಿರೀಕ್ಷಿತ ಬೀಜಿಂಗ್- ಶಾಂಘೈ ಮಧ್ಯೆ ಸಂಪರ್ಕ ಕಲ್ಪಿಸುವ ಅತ್ಯಂತ ವೇಗದ ಬುಲೆಟ್ ರೈಲಿಗೆ ಗುರುವಾರ ಹಸಿರು ನಿಶಾನೆ ದೊರೆಯಿತು. ಚೀನಾದ ಪ್ರಧಾನಿ ವೆನ್ ಜಿಯಾಬಾವೊ ಅವರು ಇಲ್ಲಿ ಸಾಂಕೇತಿಕವಾಗಿ ಹಸಿರು ನಿಶಾನೆ ತೋರಿಸಿದ ಬಳಿಕ ಮೊದಲ ರೈಲಿನಲ್ಲಿ ಶಾಂಘೈಗೆ ಪ್ರಯಾಣಿಸಿದರು.

ಆಡಳಿತಾರೂಢ ಚೀನಾ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) 90ನೇ ವಾರ್ಷಿಕೋತ್ಸವ ಇಂದು ನಡೆಯಲಿದ್ದು, ಅದರ ಮುನ್ನಾದಿನ ಈ ರೈಲು ಸಂಚಾರ ಆರಂಭವಾಗಿದೆ. ಎರಡು ನಗರಗಳ ಮಧ್ಯೆ ಇರುವ 1,318 ಕಿಮೀ ಅಂತರವನ್ನು ಈ ಹಿಂದಿನ ರೈಲುಗಳು 10 ಗಂಟೆಗಳಲ್ಲಿ ಕ್ರಮಿಸುತ್ತಿದ್ದವು. ಈಗ ಈ ಹೊಸ ಬುಲೆಟ್ ರೈಲು 5 ಘಂಟೆಯಲ್ಲೇ ದೂರವನ್ನು ಸರಾಗವಾಗಿ ಕ್ರಮಿಸಲಿದೆ.

ಕೆಲವು ಬುಲೆಟ್ ರೈಲುಗಳು ಚೀನಾದ ಕೆಲವು ನಗರಗಳಲ್ಲಿ ಸಂಚರಿಸುತ್ತಿವೆ. ಆದರೆ ಗುರುವಾರ ಚಾಲನೆಗೊಂಡ ರೈಲು ಅತಿ ಹೆಚ್ಚಿನ ದೂರ ಕ್ರಮಿಸುವಂತಹದ್ದಾಗಿದೆ. ಈ ರೈಲು ಚೀನಾದ ಶ್ರೀಮಂತ ಪಾನ್-ಬೋಯಿ ಮತ್ತು ಯಂಗ್ಟ್ಜೆ ನದಿ ಮುಖಜ ಭೂಮಿಯನ್ನು ಸಂಪರ್ಕಿಸಲಿದೆ.

ಬೀಜಿಂಗ್-ಶಾಂಘೈ ಮಧ್ಯೆ ರೈಲು ಹಳಿ ಅಳವಡಿಸಲು 215 ಶತಕೋಟಿ ಯಾನ್ (32.5 ಶತಕೋಟಿ ಡಾಲರ್) ಖರ್ಚು ಮಾಡಲಾಗಿದೆ. ಈ ರೈಲು ಮೂಲತಃ ಗಂಟೆಗೆ 350 ಕಿಮೀ ವೇಗವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಸುರಕ್ಷತೆ ದೃಷ್ಟಿಯಿಂದ ಸದ್ಯಕ್ಕೆ ಗಂಟೆಗೆ 300 ಕಿಮೀ ಮಾತ್ರ ಚಲಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+