ಸಚಿನ್ ಮತ್ತು ಧೋನಿಗೆ ಸುಕೋಯ್ ವಿಮಾನ ಯೋಗ

"ದೇಶದ ಎರಡು ಕ್ರಿಕೆಟ್ ತಾರೆಗಳ ಸುಕೋಯ್ ಪ್ರಯಾಣಕ್ಕೆ ರಕ್ಷಣಾ ಸಚಿವಾಲಯ ಅನುಮತಿಯನ್ನು ನೀಡಿದೆ. ಶೀಘ್ರದಲ್ಲಿ ಅವೆರಡು ಯುದ್ಧ ವಿಮಾನಗಳು ಪುಣೆಗೆ ಆಗಮಿಸಲಿವೆ" ಎಂದು ಐಎಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತೆಂಡೂಲ್ಕರ್ ಮತ್ತು ಧೋನಿಗೆ ಸುಕೋಯ್ ನಲ್ಲಿ ಪ್ರಯಾಣಿಸಲು ಅವಕಾಶ ನೀಡುವಂತೆ ಸರಕಾರವು ಇತ್ತೀಚೆಗೆ ಇಂಡಿಯನ್ ಏರ್ ಫೋರ್ಸ್ ಗೆ ಮನವಿ ಸಲ್ಲಿಸಿತ್ತು. ಆದರೂ ಕ್ರಿಕೆಟ್ ತಾರೆಗಳ ಸುಕೋಯ್ ಪ್ರಯಾಣದ ದಿನಾಂಕ ಇನ್ನೂ ನಿಗದಿಯಾಗಿಲ್ಲ.
ಇಂಡಿಯನ್ ಏರ್ ಫೋರ್ಸ್ ಗೆ ಈಗಾಗಲೇ ಸಚಿನ್ ತೆಂಡೂಲ್ಕರ್ ರನ್ನು ಗೌರವಾನ್ವಿತ ಕ್ಯಾಪ್ಟನ್ ಆಗಿ ನೇಮಕ ಮಾಡಲಾಗಿದೆ. ಮಹೇಂದ್ರ ಸಿಂಗ್ ಧೋನಿಗೂ ಈ ಗೌರವ ನೀಡುವ ಪ್ರಸ್ತಾಪವೂ ಕೇಳಿಬಂದಿದೆ.
ಪುಣೆ ಸಮೀಪದ ಏರ್ ಫೋರ್ಸ್ ಸ್ಟೇಷನ್ ನಲ್ಲಿ ಸುಕೋಯಿ ಯುದ್ಧ ವಿಮಾನಗಳಿವೆ. ಈ ಹಿಂದೆ ರಾಷ್ಟ್ರಪತಿ ಪ್ರತೀಭಾ ಪಾಟೀಲ್ ಮತ್ತು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಸುಕೋಯ್ ನಲ್ಲಿ ಹಾರಾಟ ನಡೆಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.












Click it and Unblock the Notifications