ನಾಯಂಡಹಳ್ಳಿ ಜಂಕ್ಷನ್ ನಲ್ಲಿ ಸಂಚರಿಸುವಾಗ ಎಚ್ಚರವಿರಲಿ

24/7 ಟ್ರಾಫಿಕ್ ಜಾಮ್ ನೋಡಬೇಕೆಂದಿದ್ದರೆ ನಾಯಂಡಹಳ್ಳಿ ಜಂಕ್ಷನ್ನಿಗೆ ಬರಬೇಕು. ಮೈಸೂರು ರಸ್ತೆಯಲ್ಲಿ ಸಂಚರಿಸುವ ನಾಗರಿಕರು ದಿನದ ಮೂರ್ನಾಲ್ಕು ಗಂಟೆಗಳನ್ನು ಈ ರಸ್ತೆಯಲ್ಲಿಯೇ ಕಳೆಯಬೇಕು ಹಾಗಿರುತ್ತದೆ ವಾಹನ ದಟ್ಟಣೆ. ಇನ್ನು ರಿಂಗ್ ರಸ್ತೆ ಬಂದು ಸೇರುವ ಜಂಕ್ಷನ್ನಿನಲ್ಲಿ ಸಂಚಾರಿಗಳು ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.
ಮೈಸೂರನ ಕಡೆಯಿಂದ ಬರುವ ಮಾರ್ಗದಲ್ಲಿ ಮೆಟ್ರೋಗಾಗಿ ಬೃಹತ್ ಸ್ತಂಭಗಳನ್ನು ನಿರ್ಮಿಸಿದ ಜಾಗದಲ್ಲಿ ದೊಡ್ಡ ಪ್ರಮಾಣದ ತೆಗ್ಗನ್ನು ನಿರ್ಮಿಸಲಾಗಿದೆ. ಅದರ ತುದಿಯ ಮೇಲೆ ವಾಹನಗಳು ಸಾಗುತ್ತಿದ್ದರೂ ತಡೆಗೋಡೆಯನ್ನು ನಿಲ್ಲಿಸಿಲ್ಲ. ಅಕಸ್ಮಾತ್ ವಾಹನವೇನಾದರೂ ಜಾರಿ ಆ ತೆಗ್ಗಿನಲ್ಲಿ ಬಿದ್ದರೆ ಅಪಾಯ ಗ್ಯಾರಂಟಿ. (ಚಿತ್ರ ನೋಡಿ)
ಈ ಕಾಮಗಾರಿಯನ್ನು ನೋಡಿಕೊಳ್ಳುತ್ತಿರುವವರಿಗೆ ಇದು ಗಮನಕ್ಕೆ ಬಂದಂತಿಲ್ಲ. ಬಂದಿದ್ದರೂ ಜಾಣ ಕುರುಡರಂತೆ ವರ್ತಿಸುತ್ತಿರುವುದು ಸುಸ್ಪಷ್ಟ. ಯಾವುದೇ ಅಪಾಯ, ಪ್ರಾಣಹಾನಿ ಸಂಭವಿಸುವುದಕ್ಕಿಂತ ಮೊದಲೇ ಎಚ್ಚೆತ್ತುಕೊಂಡು ಅಲ್ಲಿ ತಡೆಗೋಡೆ ನಿರ್ಮಿಸುವುದು ವಿಹಿತ.
ನಾಯಂಡಹಳ್ಳಿ ಮಾತ್ರವಲ್ಲ ಕನಕಪುರ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಇಂತಹ ಅಪಾಯಕರ ಜಾಗಗಳು ದುರಂತಕ್ಕೆ ಆಹ್ವಾನ ನೀಡುವಂತಿವೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದು ನಾಗರಿಕರ ಕರ್ತವ್ಯ ಕೂಡ. ಗಡ್ಡಕ್ಕೆ ಬೆಂಕಿ ಬಿದ್ದಮೇಲೆ ಬಾವಿ ತೋಡುವುದು ಎಷ್ಟು ಸರಿ?












Click it and Unblock the Notifications