ಬ್ರಿಟನ್ ನಲ್ಲಿ ಯುವತಿಯರ ಬ್ರಾ ಸೈಜ್ ನೋಡಿ ನೇಮಕಾತಿ

ಪುರುಷ ಉದ್ಯೋಗಿಗಳೇ ಹೆಚ್ಚಾಗಿರುವ ಕ್ಯಾಥೆಲ್ಕೋ ಸಂಸ್ಥೆಯಲ್ಲಿ ಪೆಟೆ ಸ್ಮಿತ್ ಮತ್ತು ಕೆವಿನ್ ವಾರ್ಡ್ ಎಂಬುವ ಇಬ್ಬರು ಕೀಚಕರಿದ್ದಾರೆ. ಮಹಿಳಾ ಉದ್ಯೋಗಿಗಳಿಗೆ ಕೆಲಸ ಒದಗಿಸಲು ವಿನೂತನ ಮಾನದಂಡವನ್ನು ಅವರು ಉಪಯೋಗಿಸುತ್ತಿದ್ದಾರೆ. ಈ ಚಪಲ ಚೆನ್ನಿಗರು ಸಂದರ್ಶನಕ್ಕೆ ಬರುವ ಯುವತಿಯರ ಬುದ್ಧಿ ಕೌಶಲ್ಯ ಅಳೆಯುವ ಬದಲು, ದೇಹದ ಅಂಗಾಂಗಗಳನ್ನು ಅಳೆಯುತ್ತಾರೆ. ಇಂಟರ್ ವ್ಯೂ ತೆಗೆದುಕೊಳ್ಳುವಾಗ ಯುವತಿಯರ ಒಳ ಉಡುಪಿನ ಸೈಜು ಕೇಳಿ ಆಯ್ಕೆ ಮಾಡುತ್ತಾರೆ.
ಕಚೇರಿಯಲ್ಲಿರುವ ಸುಂದರ ಹುಡುಗಿಯರ ಹಿಂದೆ ಬೀಳುವ ಪೇಟೆ ಮತ್ತು ಕೆವಿನ್, ತಮ್ಮ ಚೇಂಬರ್ ಗೆ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡುವುದು ಸಾಮಾನ್ಯವಾಗಿದೆ. ಒಮ್ಮೆ ನನಗೆ ಕೂಡಾ ಅಂಥ ಅನುಭವವಾಯಿತು. ಕೆವಿನ್ ನನ್ನ ನಿತಂಬಕ್ಕೆ ಬಲವಾಗಿ ಬಾರಿಸಿ ಕೆಟ್ಟದಾಗಿ ನಗಾಡುತ್ತಿದ್ದ, ಆಮೇಲೆ ನಾನು ಸಂಸ್ಥೆ ಬಿಟ್ಟು ಬಿಟ್ಟೆ ಎನ್ನುತ್ತಾರೆ ಸೇಲ್ಸ್ ವಿಭಾಗದಲ್ಲಿದ್ದ ಏಂಜಲೀನಾ.
ಇದಲ್ಲದೆ ಕಂಪೆನಿ ಹೊರಗೆ ಕೂಡ ಪ್ರೀತಿ ನಾಟಕವಾಗಿ ಮೋಸ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿದೆ. ಅನೇಕ ಮಹಿಳೆಯರು ಈ ಕಂಪೆನಿ ಸೇರುವುದಕ್ಕೆ ಹೆದರುತ್ತಿದ್ದಾರೆ. ಕೆಲಸಕ್ಕೆ ಸೇರಿದವರು ಆದಷ್ಟು ಬೇಗ ಸಂಸ್ಥೆ ತೊರೆಯುತ್ತಿದ್ದಾರೆ ಎಂದು ಇನ್ನೊಬ್ಬ ಮಾಜಿ ಉದ್ಯೋಗಿ ಅಲೀನಾ ಟೈಲ್ಡ್ ಪ್ರತಿಕ್ರಿಯಿಸಿದ್ದಾರೆ. ಆದರೆ, ಎಲ್ಲಾ ಆರೋಪಗಳನ್ನು ಕ್ಯಾಥೆಲ್ಕೋ ಸಂಸ್ಥೆ ತಳ್ಳಿಹಾಕಿದೆ. [ ಸ್ತನ ಆರೈಕೆ ]
;












Click it and Unblock the Notifications