ಬೆಂಗಳೂರಿನ 'ಸಿಲಿಕಾನ್ ವ್ಯಾಲಿ' ಪಟ್ಟ ಕೇರಳ ಪಾಲು

ದೇಶದ ಪ್ರಮುಖ ಐಟಿ ಕೇಂದ್ರಗಳಲ್ಲಿ ಅಪಾರ ದಟ್ಟಣೆಯಿರುವುದರಿಂದ ಐಟಿ ಮಾರುಕಟ್ಟೆ ಮತ್ತು ಬಂಡವಾಳ ಹೂಡಿಕೆಗೆ ಕೇರಳ ಅನನ್ಯ ಅವಕಾಶ ಹೊಂದಿದೆ. ಅಲ್ಲದೇ ನಿರ್ವಹಣಾ ವೆಚ್ಚವೂ ಕಡಿಮೆಯಾಗಿದೆ ಎಂದು ಕೊಚ್ಚಿ ಇನ್ಫೋಪಾರ್ಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿಗೋ ಜೋಸೆಫ್ ಅವರನ್ನು ಉಲ್ಲೇಖಿಸಿ, ಗಲ್ಫ್ ನ್ಯೂಸ್ ವರದಿ ಮಾಡಿದೆ.
ಮೂಲಸೌಕರ್ಯಗಳ ಕೊರತೆ ಹಿನ್ನೆಲೆಯಲ್ಲಿ ಬೆಂಗಳೂರು ಕುರಿತು ಐಟಿ ಕಂಪನಿಗಳ ಒಲವು ಕಡಿಮೆಯಾಗಿದೆ ಎಂದು ಭಾರತದ ಕೈಗಾರಿಕೆ ಮತ್ತು ಅಸೋಸಿಯೇಟೆಡ್ ಚೇಂಬರ್ ಆಫ್ ಕಾಮರ್ಸ್ ವರದಿ ಹೇಳಿತ್ತು. ಅಲ್ಲದೇ ಬೆಂಗಳೂರಿನಲ್ಲಿರುವ ಶೇ.55ರಷ್ಟು ಕಂಪನಿಗಳು ತಮ್ಮ ಕಾರ್ಯಕ್ಷೇತ್ರವನ್ನು ಬೇರೆಡೆ ಸ್ಥಳಾಂತರಿಸಲು ಯೋಜಿಸುತ್ತಿವೆ ಎಂದೂ ಇತ್ತೀಚೆಗೆ ಹೇಳಿತ್ತು.
2015ರ ಹೊತ್ತಿಗೆ ಕೇರಳದಲ್ಲಿ ಐಟಿ ಕಂಪನಿಗಳಿಂದ 2 ಲಕ್ಷ ಉದ್ಯೋಗ ಸೃಷ್ಟಿಯಾಗಲಿದ್ದು, ಇನ್ಫೋಪಾರ್ಕ್ ಒಂದರಿಂದಲೇ 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಜೋಸೆಫ್ ಹೇಳಿದ್ದಾರೆ.












Click it and Unblock the Notifications