ಮಹಿಳಾ ಫ‌ುಟ್‌ಬಾಲ್‌: ಶುರುವಾಗಿದೆ ಆಕ್ಟೋಪಸ್‌ ಪೌಲಾ ಆಟ !

Paula to predict women's football
ಬರ್ಲಿನ್‌‌, ಜೂನ್ 26: ಇಂದಿನಿಂದ ಜರ್ಮನಿಯಲ್ಲಿ ಮಹಿಳಾ ವಿಶ್ವಕಪ್‌ ಫ‌ುಟ್‌ಬಾಲ್‌ ಪ್ರಾರಂಭವಾಗಲಿದ್ದು, ಈ ಬಾರಿಯೂ ಜರ್ಮನಿ ಪಾಲ್ಗೊಳ್ಳುವ ಪಂದ್ಯಗಳ ಫ‌ಲಿತಾಂಶ ನುಡಿಯಲು ಮತ್ತೂಂದು ಆಕ್ಟೋಪಸ್‌ ಜನ್ಮ ತಾಳಿದೆ.

ಇದು ಹೇಳಿಕೇಳಿ ಮಹಿಳಾ ಫ‌ುಟ್‌ಬಾಲ್‌. ಅದಕ್ಕೆಂದೇ ಸಮಾನತೆ ಕಾಯ್ದುಕೊಳ್ಳಲು ಸ್ತ್ರಿ ಆಕ್ಟೋಪಸ್‌ ಅನ್ನು ಆಯ್ಕೆ ಮಾಡಲಾಗಿದೆ. ಹೆಸರು 'ಪೌಲಾ'. ಅಲ್ಲಿಗೆ ಲಿಂಗ ಬದಲಿಸಿ ಎಂದು 'ಪೌಲ್' ಅನ್ನು ಕೊಟ್ಟಾಗ ಹೈಸ್ಕೂಲ್ ಮಕ್ಕಳು ಪೌಲಾ ಎನ್ನಬಹುದು. (ಪೌಲಾ x ಪೌಲ್ )

ಅಷ್ಟಪದಿ ಪೌಲಾ ಉದ್ಘಾಟನಾ ಪಂದ್ಯದಲ್ಲಿ ಜರ್ಮನಿ ವಿರುದ್ಧ ಕೆನಡಾ ಗೆಲ್ಲಲಿದೆ ಎಂದು ಈಗಾಗಲೇ ಭವಿಷ್ಯ ನುಡಿದಿದೆ. ಇದು ನಿಜವಾದಲ್ಲಿ ಈ ಅಷ್ಟಪದಿಯೂ ತಾರೆಯಾಗುವ ದಿನ ದೂರವಿಲ್ಲ.

ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದ ಫಿಫಾ ವಿಶ್ವಕಪ್‌ ಸಂದರ್ಭದಲ್ಲಿ ಜರ್ಮನಿ ಆಡಿದ ಎಲ್ಲಾ ಪಂದ್ಯಗಳ ಫ‌ಲಿತಾಂಶವನ್ನು ನಿಖರವಾಗಿ ಭವಿಷ್ಯ ನುಡಿದಿದ್ದ 'ಪೌಲ್‌' ಹೆಸರಿನ ಆಕ್ಟೋಪಸ್‌ (ಅಷ್ಟಪದಿ) ಸೂಪರ್ ಸ್ಟಾರ್ ಪಟ್ಟಕ್ಕೇರಿತ್ತು.

ಫೈನಲ್‌ನಲ್ಲಿ ಸ್ಪೇಯ್‌ನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದ ಪಾಲ್‌ಗೆ ಸ್ಪೇಯ್ನ್ ಗೌರವ ಪೌರತ್ವ ಸಹ ನೀಡಲಾಗಿತ್ತು. ಕೆಲವು ತಿಂಗಳ ಬಳಿಕ ಆಕ್ಟೋಪಸ್‌ ಸತ್ತಾಗ ವಿಶ್ವಾದ್ಯಂತ ಅದರ ಅಭಿಮಾನಿಗಳು ಶೋಕ ಆಚರಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+