ಪೋಲಿ ಗೈಡ್‌ಗಳ ಅಭಿಲಾಷೆ ವಿದ್ಯಾರ್ಥಿನಿಯರಿಗೆ ಕಂಟಕ

ಇಂಥ ಪ್ರಕರಣಗಳಿಂದ ವಿಶ್ವವಿದ್ಯಾಲಯದ ಮಟ್ಟದಲ್ಲಿ ಸಂಶೋಧನೆ ಕೈಗೊಳ್ಳುವ ಮಹಿಳಾ ವಿದ್ಯಾರ್ಥಿಗಳು ಸಂಶೋಧನೆಯಿಂದ ದೂರ ಸರಿಯಬಹುದಾಗಿದೆ.
ಮಾರ್ಗದರ್ಶಕ ರಸಿಕ ಪ್ರಿಯರು ತಮ್ಮ ಬಳಿ ಉನ್ನತ ಅಭಿಲಾಷೆಯಿಂದ ನೂರು ಕನಸು ಕಟ್ಟಿ ಬರುವ ವಿದ್ಯಾರ್ಥಿಗಳನ್ನು ಸಂಶೋಧನೆ ಹೆಸರಲ್ಲಿ ತಮ್ಮ ಸ್ವಾರ್ಥ ದುರಾಶೆಗಳಿಗೆ ಬಳಸಿಕೊಳ್ಳುವುದು ಖೇದದ ಸಂಗತಿಯಾಗಿದೆ.
ಮಾರ್ಗದರ್ಶಕರು ಎಂದರೆ ಸಂಶೋಧನಾ ವಿದ್ಯಾರ್ಥಿಗಳಲ್ಲಿ ಅಪಾರವಾದ ಗೌರವ ಇರುತ್ತದೆ. ಆದರೆ ಅವರು ಇಟ್ಟಿರುವ ಆ ಗೌರವವನ್ನು ಮಾರ್ಗದರ್ಶಕರು ನೋಡುವ ಪರಿ ವಿಭಿನ್ನವಾಗುತ್ತಿದೆ.
ವಿವಿಧ ಕೇತ್ರಗಳಲ್ಲಿ ಸಾಕಷ್ಟು ಸಂಶೋಧನೆ ನಡೆಯಬೇಕಿದ್ದು ಮಾರ್ಗದರ್ಶಕ ಅಧ್ಯಾಪಕವರ್ಗ ತಮ್ಮ ಸಂಶೋಧನಾ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ನೈಜ ಸಂಶೋಧನೆಯತ್ತ ಉತ್ತಮ ಮಾರ್ಗದರ್ಶನ ಮಾಡುವತ್ತ ಗಮನ ಹರಿಸಲಿ. ವಿದ್ಯಾರ್ಥಿನಿಯರತ್ತ ನೋಡುವ ಲೈಂಗಿಕ ಮನೋಭಾವ ಬದಲಾಗಲಿ.












Click it and Unblock the Notifications