ಲಕ್ಷ್ಮಿಗೆ ಮೂರು ಕರು, ಹಾಲು ಮಾರೋದು ಹೇಗೆ ಗುರು?
ಮೈಸೂರು,
ಜೂ. 23 : ಸಾಮಾನ್ಯವಾಗಿ ಎಲ್ಲಾ ಹಸುಗಳು ಒಂದೇ ಕರುವನ್ನು ಹಾಕುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಕೆಲವೊಮ್ಮೆ ಅವಳಿ-ಜವಳಿ ಕರು ಹಾಕಿ ಅಚ್ಚರಿ ಮೂಡಿಸುವುದೂ ಇದೆ. ಆದರೆ ಮೈಸೂರಿನಲ್ಲಿ ಇದೀಗ ಹಸುವೊಂದು ತ್ರಿವಳಿ ಕರುಗಳಿಗೆ ಜನ್ಮನೀಡಿ ಎಲ್ಲರನ್ನು ಬೆರಗಾಗಿಸಿದೆ. ಇದನ್ನು ನೋಡಲು ಹತ್ತಿರದವರೆಲ್ಲಾ ಬರುತ್ತಿದ್ದಾರೆ. id="toptextpromo">ಮೈಸೂರಿನ
ಇಟ್ಟಿಗೆಗೂಡು ನಿವಾಸಿಯಾದ ಶ್ರೀನಿವಾಸ್‌ರವರು ಕಳೆದ ಕೆಲವು ವರ್ಷಗಳಿಂದ ಲಕ್ಷ್ಮಿ ಎಂಬ ಹಸುವನ್ನು ಮುದ್ದಿನಿಂದ ಸಾಕಿದ್ದಾರೆ. ಅದು ಗರ್ಭಾವಸ್ಥೆಯಲ್ಲಿದ್ದಾಗ ಅದನ್ನು ಜತನದಿಂದ ಸಾಕಿದ್ದರು. ಅದರ ಹೊಟ್ಟೆ ನೋಡಿದ ಅವರಿಗೆ ಇದೇನಪ್ಪಾ ಇಷ್ಟು ದೊಡ್ಡದಾಗಿದೆಯಲ್ಲ ಎಂದು ತಲೆಕೆರೆದುಕೊಂಡಿದ್ದರು. id='are-slot-1' class='oiad oi-axt oiadv'> id='top-searched-articles'>ಇದೀಗ
ಮುದ್ದಿನ ಹಸು ಲಕ್ಷ್ಮಿ ಮೂರು ಕರುಗಳಿಗೆ ಜನ್ಮ ನೀಡಿದ್ದು ಅದರ ಒಡೆಯ ಶ್ರೀನಿವಾಸ್ ಅವರಿಗೆ ಖುಷಿಯಾಗಿದೆ. ಜೊತೆಯಲ್ಲಿಯೇ ಹಸುವಿನ ಹಾಲು ಮಾರಿ ಜೀವನ ಮಾಡುವ ಅವರಿಗೆ ಮೂರು ಕರುಗಳಿಗೆ ಹಾಲು ನೀಡಿದರೆ ನಮಗೇನು ಉಳಿಯುತ್ತೆ ಎಂಬ ಬೇಸರವೂ ಇಲ್ಲದಿಲ್ಲ. ಅದು ಏನೇ ಇರಲಿ ಹಸು ಮೂರು ಕರುವಿಗೆ ಜನ್ಮ ನೀಡಿದ್ದು ನಿಜಕ್ಕೂ ಅಚ್ಚರಿಯೆ.











Click it and Unblock the Notifications