ಜೆಪಿನಗರದಲ್ಲಿ ಬೀದಿ ವ್ಯಾಪಾರಿಗಳ ವೇಶ್ಯಾವಾಟಿಕೆ ಜಾಲ!
ಜೆ.ಪಿ.ನಗರ
3ನೇ ಹಂತ ಈಸ್ಟ್ ಎಂಡ್ ಹತ್ತಿರ ಹಾಗೂ ರಾಗಿಗುಡ್ಡ ಸ್ಲಮ್ ರಸ್ತೆ ಬದಿ ತಿಂಡಿ ಅಂಗಡಿಯವರು ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಸಂಜೆಯಾದರೆ ಒಂದು ಗಿರಾಕಿಗೆ ಇಂತಿಷ್ಟು ಕಮಿಷನ್ ಪಡೆದು ಹುಡುಗಿಯರು ಮತ್ತು ಹುಡುಗರನ್ನು ವ್ಯವಹಾರಕ್ಕೆ ಕುದುರಿಸುತ್ತಾರೆ. ಇವರಿಂದಾಗಿ ಸುಮಾರು 3 ವರ್ಷಗಳಿಂದ ಈ ಸ್ಥಳ ವೇಶ್ಯಾವಾಟಿಕೆ ದಂಧೆಯ ಕೇಂದ್ರವಾಗಿದೆ. ಮರ್ಯಾದಸ್ಥ ಮಹಿಳೆಯರು ತಿರುಗಾಡುವಂತೆಯೇ ಇಲ್ಲ ಎಂಬಂಥ ಸ್ಥಿತಿ ತಲುಪಿದೆ. id="toptextpromo">ಈ
ಜಾಗದಲ್ಲಿ ಈ ಹಿಂದೆ ಡಕಾಯಿತಿ ನಡೆದಿತ್ತು. ಆ ಗ್ಯಾಂಗ್‌ಗೆ ಸುತ್ತಮುತ್ತಲಿನವರ ಸಹಕಾರ ಇತ್ತು ಎಂಬ ವದಂತಿಯಿದೆ. ಈಗಲೂ ಇಲ್ಲಿ ಡಕಾಯಿತಿ ಸರಗಳ್ಳತನ, ಪಿಕ್‌ಪಾಕೆಟ್ ಅವಿರತವಾಗಿ ನಡೆಯುತ್ತಿದೆ. ಇದರ ಬಗ್ಗೆ ಪೊಲೀಸರೂ ಕ್ರಮ ಕೈಗೊಳ್ಳದೆ ಸುಮ್ಮನಿರುವುದು ನೋಡಿದರೆ ಅನುಮಾನ ಬರುತ್ತದೆ. ರಾಗಿಗುಡ್ಡ ಸ್ಲಮ್ ಅಕ್ರಮ ಚಟುವಟಿಕೆಗಳ ಕೇಂದ್ರ ತಾಣವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. id='are-slot-1' class='oiad oi-axt oiadv'> id='top-searched-articles'>ಈ
ಜಾಗದಲ್ಲಿ ಮಹಾನಗರ ಪಾಲಿಕೆಯವರು ಪಾನಿಪುರಿ ಸೇರಿದಂತೆ ಎಲ್ಲ ರೀತಿಯ ಅಂಗಡಿಯನ್ನು ನಿಷೇಧಿಸಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಬೇಕು. ಸಾರ್ವಜನಿಕರು ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸಬೇಕು.











Click it and Unblock the Notifications