ಬೆಂಗಳೂರು : ವೇಶ್ಯಾವಾಟಿಕೆಯಿಂದ 3 ಹುಡುಗಿಯರು ಪಾರು

ಆ ಮೂವರು ಹುಡುಗಿಯರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವಾರವಷ್ಟೆ ಬೆಂಗಳೂರಿನ ಸಿಟಿ ಲಾಡ್ಜ್ ಮೇಲೆ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು 10 ಹುಡುಗಿಯರನ್ನು ವೇಶ್ಯಾವಾಟಿಕೆಯ ಬಲೆಯಿಂದ ಪಾರು ಮಾಡಿದ್ದರು.
ವಿವಿಧ ಲೈವ್ ಬ್ಯಾಂಡ್ ಗಳಿಗೆ ಹುಡುಗಿಯನ್ನು ಸಪ್ಲೈ ಮಾಡುವ ದಂಧೆ ಮಾಡುತ್ತಿದ್ದ ಉತ್ತರ ಪ್ರದೇಶದ ಅಮಿತ್ ಕುಮಾರ್ ಮತ್ತು ಬಿಹಾರದ ರವಿಕುಮಾರ್ ಮೆಹ್ತಾ ಎಂಬಿಬ್ಬರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಕಾಲಿಗೆ ಬುದ್ಧಿ ಹೇಳಿದ್ದಾರೆ ಎಂದು ಸಹಾಯಕ ಪೊಲೀಸ್ ಕಮಿಷನರ್ ಎಸ್ ವಿ ಗುಳೇದ್ ಹೇಳಿದರು.
ಬೆಂಗಳೂರಿನಲ್ಲಿ ಅನೇಕ ಲೈವ್ ಬ್ಯಾಂಡ್ ಗಳು ಮುಚ್ಚಿದ್ದರಿಂದ ಪಿಂಪ್ ಗಳು ಹುಡುಗಿಯರನ್ನು ಬಲಾತ್ಕಾರವಾಗಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದಾರೆ. ಕೋಲ್ಕತಾ, ಮುಂಬೈ, ದೆಹಲಿ, ಉತ್ತರ ಪ್ರದೇಶಗಳಿಂದ ಕೆಲಸವನ್ನರಸಿ ಬಂದಿರುವ ತರುಣಿಯರು ಸೆಕ್ಸ್ ಜಾಲದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಪಾರಾದ ಹುಡುಗಿಯರನ್ನು ಅವರು ಊರಿಗೆ ವಾಪಸ್ ಕಳಿಸಲಾಗುತ್ತಿದೆ.












Click it and Unblock the Notifications