ಡಾಟ್ ಕಾಮ್ ಗೆ ಗುಡ್ ಬೈ, ಡಾಟ್ ಪಕ್ಕ ಏನಾದ್ರೂ ಹಾಕ್ಕೊಳ್ಳಿ

ಸದ್ಯಕ್ಕೆ ಡಾಟ್ ಕಾಮ್(.com), ಡಾಟ್ ಆರ್ಗ್, ಡಾಟ್ ಇನ್.. ಇತ್ಯಾದಿ ರೀತಿ 22 ಅಧಿಕೃತ ಡೊಮೈನ್ ನೇಮ್ ಗಳನ್ನು ಬಳಸಬಹುದಾಗಿತ್ತು. ಇನ್ನು ಮೇಲೆ ಡಾಟ್ ಮಲೆನಾಡು, ಡಾಟ್ ಕರ್ನಾಟಕ ಇತ್ಯಾದಿಗಳನ್ನು ನಿಮ್ಮದೇ ಭಾಷೆಯಲ್ಲಿ ಬಳಸಬಹುದಾಗಿದೆ. ಡಾಟ್ ಕಾರ್,ಡಾಟ್ ಗ್ರೀನ್, ಡಾಟ್ ಪೆಪ್ಸಿ ಈ ರೀತಿ ಟಾಪ್ ಲೆವಲ್ ಡೊಮೈನ್ ಬಳಕೆಗೆ ಬರಲಿದೆ. ಆದರೆ ಇದು ಉಚಿತವಾಗಿ ಸದ್ಯಕ್ಕೆ ಸಿಗುತ್ತಿಲ್ಲ.
ಈ ಅಪ್ಲಿಕೇಷನ್ ಕೊಳ್ಳಬೇಕಾದರೆ 185,000 ಡಾಲರ್ ತೆರಬೇಕು ಅಲ್ಲದೆ ವಾರ್ಷಿಕ ವೆಚ್ಚ 25,000 ಡಾಲರ್ ಕೂಡಾ ನೀಡಬೇಕು. ಆದರೆ, ಇದು ವಾಣಿಜ್ಯ ಉದ್ದೇಶಿತ ಕಂಪೆನಿಗಳಿಗೆ ಅನುಕೂಲವಾಗಲಿದೆ. ಫೋನ್ ಕಂಪೆನಿ ತನ್ನ ಡೊಮೈನ್ ಹೆಸರನ್ನು ಡಾಟ್ ಫೋನ್ ಎಂದು ಬದಲಾಯಿಸಿಕೊಂಡರೆ ಗ್ರಾಹಕರಿಗೂ ಕಂಪೆನಿಗೂ ಅನುಕೂಲವಾಗಲಿದೆ.
ಇದೊಂದು ಐತಿಹಾಸಿಕ ನಿರ್ಣಯ ಇಂಟರ್ ನೆಟ್ ನಲ್ಲಿ ನೇಮಿಂಗ್ ಸಿಸ್ಟಮ್ ನಲ್ಲಿ ಕಲ್ಪನೆಗೂ ಮೀರದ ಅವಕಾಶಗಳ ಹೆಬ್ಬಾಗಿಲನ್ನು ತೆರೆಯಲಿದೆ. gTLDs ಮೂಲಕ ಆನ್ ಲೈನ್ ನಲ್ಲಿ ಹುಡುಕಾಟಕ್ಕೂ ಅನುಕೂಲವಾಗಲಿದೆ. 12 ಜನವರಿ 2012 ದಿಂದ 12 ಏಪ್ರಿಲ್ 2012 ರವರೆಗೆ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದು ICANN ನ ಸಿಇಒ ರಾಡ್ ಬೆಕ್ ಸ್ಟ್ರೋಮ್ ಹೇಳಿದ್ದಾರೆ. ವರ್ಷದ ಮೊದಲ ಹೊಸ ಡೊಮೈನ್ ಯಾರು ಪಡೆಯಲಿದ್ದಾರೆ ಎಂದು ನೆಟಿಜನ್ ಗಳು ಕುತೂಹಲದಿಂದ ಕಾದಿದ್ದಾರೆ.












Click it and Unblock the Notifications