600ಕ್ಕೆ 600 ಮಾರ್ಕ್ಸ್: ಕೇರಳ ವಿದ್ಯಾರ್ಥಿನಿಯ ಮ್ಯಾಜಿಕ್

ದೇಶದ ಶೈಕ್ಷಣಿಕ ಇತಿಹಾಸದಲ್ಲಿ ಈ ರೀತಿ 600 ಕ್ಕೆ 600 ಮಾರ್ಕ್ಸ್ ತೆಗೆದುಕೊಂಡಿರುವುದು ಬಹುಶಃ ಇದೇ ಮೊದಲು. ಅಂದರೆ ಈಕೆ ಗಳಿಸಿರುವುದ ಫುಲ್ ಮಾರ್ಕ್ಸ್ ಅಲ್ಲ ಆಲ್ ಮಾಕ್ಸ್ ಅನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದಾಳೆ.
ಹೆಸರು ಲಕ್ಷ್ಮಿಯಾಗಿದ್ದರೂ ಸರಸ್ವತಿ ಪುತ್ರಿಯಾಗಿರುವ ಈ ಬಾಲಕಿ, ಕೇರಳ ಪಿಯು ಮಂಡಳಿ ನಡೆಸಿದ್ದ ಪರೀಕ್ಷೆಯಲ್ಲಿ ಕಾಮರ್ಸ್ ವಿಭಾಗದಲ್ಲಿ 600 ಕ್ಕೆ 600 ಮಾರ್ಕ್ಸ್ ತೆಗೆದುಕೊಂಡಿದ್ದು, ನಂಗೆ ಯಾರ ಹಂಗೂ ಇಲ್ಲ ಎಂದು ದೆಹಲಿ ವಿಶ್ವವಿದ್ಯಾಲಯಕ್ಕೆ ಸವಾಲು ಹಾಕಿದ್ದಾಳೆ.
ಅಂತೆಯೇ ದೆಹಲಿ ವಿವಿಯ ಸೆಂಟ್ ಸ್ಟಿಫನ್ಸ್ ಕಾಲೇಜಿಗೆ ಬಿಎ ಎಕನಾಮಿಕ್ಸ್ ಪ್ರವೇಶಕ್ಕೆ ಅರ್ಜಿ ಗುಜರಾಯಿಸಿದ್ದಾಳೆ. ದೆಹಲಿ ವಿವಿಯು ತನ್ನ ಅಧೀನ ಕಾಲೇಜುಗಳಲ್ಲಿ ಕಾಮರ್ಸ್ ಪದವಿಗೆ ಸೇರಬೇಕೆಂದರೆ ಕನಿಷ್ಠ ನಾಲ್ಕು ಸಬ್ಜೆಕ್ಟ್ ಗಳಲ್ಲಿ 100 ಕ್ಕೆ 100 ಮಾರ್ಕ್ಸ್ ತೆಗೆದಿರಬೇಕು ಎಂದು ಮೊನ್ನೆಯಷ್ಟೇ ಪ್ರಕಟಿಸಿತ್ತು.












Click it and Unblock the Notifications