ಮೊದಲ ಚುಂಬನಕ್ಕಿಂತ ಕಂದನ ನೆನಪು ನನಗಿಷ್ಟ!

ನಿಮಗೆ ಮೊದಲ ಕಂದನ ಆಗಮನವಾದ ನಂತರ ಮೊದಲ ಚುಂಬನ ಮರೆತುಬಿಡುತ್ತೀರಿ. ಯಾಕೆಂದರೆ ಮೊದಲ ಚುಂಬನಕ್ಕಿಂತ ಮೊದಲ ಮಗುವಿನ ನೆನಪು ನಿಮಗೆ ಹೆಚ್ಚು ಇಷ್ಟವಾಗಲಿದೆ. ಇದು ಹೆಚ್ಚಿನ ಮಹಿಳಾಮಣಿಗಳ ಅಭಿಪ್ರಾಯ.
ಹೀಗಂತ ಹೇಳಿದ್ದು ಬ್ರಿಟನ್ ನಲ್ಲಿ ನಡೆದ ಒಂದು ಸಮೀಕ್ಷೆ. ಬದುಕಿನಲ್ಲಿ ಮರೆಯಲಾಗದ ಸಂಗತಿಗಳು ಯಾವುದೆಂದು ಮಹಿಳೆಯರಲ್ಲಿ ಕೇಳಿದಾಗ ಅವರೆಲ್ಲರೂ ಮೊದಲ ಮಗು ಅಂದರಂತೆ. ಆದರೆ ಮೊದಲ ಚುಂಬನಕ್ಕೆ ಈ ಸಮೀಕ್ಷೆಯಲ್ಲಿ ಸಿಕ್ಕಿದ್ದು 7ನೇ ಸ್ಥಾನ.
ಮರೆಯಲಾಗದ ಕ್ಷಣದ ಕುರಿತು ಸಮೀಕ್ಷೆಯು ಸುಮಾರು 2 ಸಾವಿರ ಜನರನ್ನು ಪ್ರಶ್ನಿಸಿತ್ತು. ಮಹಿಳೆಯರಿಗೆ ಮೊದಲ ಕಂದನ ನೆನಪು ಮರೆಯಲಾಗದ್ದು. ಆದರೆ ಹೆಚ್ಚಿನ ಪುರುಷರಿಗೆ ಮರೆಯಲಾಗದ ಸಂಗತಿಯೆಂದರೆ ಮದುವೆಯಾದದ್ದಂತೆ! ಅಂತ ಡೈಲಿ ಮೈಲ್ ವರದಿ ಮಾಡಿದೆ.












Click it and Unblock the Notifications