ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರನ ಮೇಲೆ ಕಾಲಿಟ್ಟವನ ವಿಚ್ಛೇದನ ಕಥೆ

|
Google Oneindia Kannada News

Edwin Buzz Aldrin
ಲಂಡನ್, ಜೂನ್ 17: ಚಂದ್ರನ ಮೇಲೆ ಕಾಲಿಟ್ಟ ಮೊದಲ ವ್ಯಕ್ತಿ ನೀಲ್ ಆರ್ಮ್ ಸ್ಟ್ರಾಂಗ್ ಎಲ್ಲರಿಗೂ ಗೊತ್ತು. ಆದರೆ ಚಂದ್ರನ ಮೇಲೆ ಕಾಲಿಟ್ಟ ಎರಡನೇ ವ್ಯಕ್ತಿ ಯಾರು? ಅವನ ಹೆಸರು "ಎಡ್ವಿನ್ ಬಜ್ ಆಲ್ಡ್ರಿನ್".

ಚಂದ್ರಲೋಕಕ್ಕೆ ಹೋಗಿ ಬಂದರೇನಂತೆ. ಸದ್ಯ ಈತನಿಗೆ ಭೂಲೋಕದ ಪತ್ನಿಯ ಸಹವಾಸ ಸಾಕೆಂದೆನಿಸಿದೆ. ಅದಕ್ಕಾಗಿ 81 ವರ್ಷದ ಆಲ್ಡ್ರಿನ್ 23 ವರ್ಷದ ಹಿಂದೆ ಮದುವೆಯಾಗಿದ್ದ ಎಲ್ ಡಿ ಕ್ಯಾನನ್ ಎಂಬಾಕೆಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ. ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ ವಿಚ್ಛೇಧನ ನಿರ್ಧಾರಕ್ಕೆ ಕಾರಣ ಎಂದು ಲಾಸ್ ಏಂಜೆಲ್ಸ್ ನ್ಯಾಯಾಲಯಕ್ಕೆ ತಿಳಿಸಿದ್ದಾನೆ.

ಇವರಿಬ್ಬರು 1988ರಲ್ಲಿ ಮದುವೆಯಾಗಿದ್ದರು. ಆದರೆ ಇಲ್ಲಿವರೆಗೆ ಮಕ್ಕಳಾಗಿರಲಿಲ್ಲ. ಆತ ಮೊದಲು ಮದುವೆಯಾಗಿದ್ದು ಜಾನ್ ಆರ್ಚರ್ ಎಂಬಾಕೆಯನ್ನು. ಅವರಿಬ್ಬರಿಗೆ ಮೂರು ಮಕ್ಕಳಿದ್ದಾರೆ. ಎರಡನೇ ಹೆಂಡತಿಯ ಹೆಸರು ಬೆವೆರ್ಲಿ ಜಿಲ್.

1969ರ ಜುಲೈ 20ರಂದು ಅಪೊಲೊ 11 ನೌಕೆಯಲ್ಲಿ ಅಂತರಿಕ್ಷಕ್ಕೆ ಹಾರಿ ಚಂದ್ರನ ಮೇಲೆ ಕಾಲಿಟ್ಟವರಲ್ಲಿ ನೀಲ್ ಆರ್ಮಸ್ಟ್ರಾಂಗ್ ಮೊದಲ ವ್ಯಕ್ತಿ. ಆಲ್ಡ್ರಿನ್ ಎರಡನೇ ವ್ಯಕ್ತಿ. ಆತನಿಗೆ ಚಂದ್ರನ ಮೇಲೆ ಕಾಲಿಟ್ಟ ಎರಡನೇ ವ್ಯಕ್ತಿ ಎಂಬ ಜೆಲಸ್ ಇಲ್ಲವಂತೆ. ಆತ 1973ರಲ್ಲಿ ತನ್ನ ಉದ್ಯೋಗಕ್ಕೆ ರಾಜಿನಾಮೆ ನೀಡಿದ್ದ. ನಂತರ ಏರ್ ಫೋರ್ಸ್ ಗೆ ಆಯ್ಕೆಯಾಗಿದ್ದ.

ನಾಸಾದಲ್ಲಿನ ಬದುಕು ಒತ್ತಡ ಇತ್ಯಾದಿಗಳ ಉಲ್ಲೇಖವಿರುವ "Magnificent Desolation and Return To Earth" ಎಂಬ ಪುಸ್ತಕವನ್ನು ಕೂಡ ಬರೆದಿದ್ದಾನೆ.

English summary
Edwin Buzz Aldrin filed for divorce from his third wife. He is the second man to step on the moon after Neil Armstrong.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X