ಕಟ್-ಥ್ರೋಟ್ ಕಾಂಪಿಟೇಶನ್: ದಿಲ್ಲಿ ವಿವಿ ವಿದ್ಯಾರ್ಥಿಗಳಿಗೆ ಪೀಕಲಾಟ

ಪ್ರಸಕ್ತ ಶಿಕ್ಷಣ ವರ್ಷದಲ್ಲಿ ದೆಹಲಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಶ್ರೀ ರಾಮ್ ಕಾಲೇಜಿನಲ್ಲಿ ಕಾಮರ್ಸ್ ಕೋರ್ಸ್ ಗೆ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಬಿಕಾಂಗೆ ಸೇರ್ಪಡೆಯಾಗಬೇಕೆಂದರೆ ಪ್ಲಸ್ ಟುನಲ್ಲಿ ನೂರಕ್ಕೆ ನೂರು ಅಂಕ ಪಡೆಯುವುದು ಕಡ್ಡಾಯ. ಇದು ಕಳೆದ ವರ್ಷಕ್ಕಿಂತ ಶೇ. 10ರಷ್ಟು ಹೆಚ್ಚಳವಾಗಿದೆ.
ಎರಡನೇ ಹಂತದಲ್ಲಿ ಪ್ರವೇಶಾಂಕ ಕಡಿಮೆ ಮಾಡುವುದಾಗಿ ಕಾಲೇಜು ಆಡಳಿತ ಮಂಡಳಿ ತಿಳಿಸಿದೆಯಾದರೂ ಅದು ನೂರಕ್ಕೆ ಸನಿಹವಾಗಿಯೇ ಇರುತ್ತದೆ ಎಂಬುದು ಎಲ್ಲರ ಲೆಕ್ಕಾಚಾರವಾಗಿದೆ. ಜೂನ್ 16ರಿಂದ ಕಾಲೇಜಿಗೆ ಪ್ರವೇಶ ಆರಂಭವಾಗಲಿದೆ. ಜುಲೈ 18ರವರೆಗೆ ನಾಲ್ಕು ಹಂತಗಳಲ್ಲಿ ಪ್ರವೇಶಗಳು ನಡೆಯಲಿವೆ.
;










Click it and Unblock the Notifications