ಅಣ್ಣಾ ಹಜಾರೆಗೆ ಇಂದು 74ರ ಹುಟ್ಟುಹಬ್ಬ ಸಂಭ್ರಮ
ಮುಂಬೈ,
ಜೂನ್ 15: ಇಂದು 74 ರ ಹರೆಯಕ್ಕೆ ಕಾಲಿಡಲಿರುವ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರು ದೆಹಲಿಯಲ್ಲಿ ನಡೆಯಲಿರುವ ಲೋಕಪಾಲ ಮಸೂದೆ ರಚನಾ ಜಂಟಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. id="toptextpromo">ಅಣ್ಣಾ
ಹಜಾರೆ ಅವರ ಆಪೇಕ್ಷೆಯ ಮೇರೆಗೆ ಅವರ ಹುಟ್ಟೂರು ಅಹ್ಮದ್‌ನಗರ ಜಿಲ್ಲೆಯ ರಾಲೆಗಾಂವ್ ಸಿದ್ಧಿಯಲ್ಲಿ ಹುಟ್ಟುಹಬ್ಬಕ್ಕೆ ಪ್ರಾಮುಖ್ಯತೆಯನ್ನು ಕಡಿಮೆ ನೀಡಲು ಉದ್ಧೇಶಿಸಲಾಗಿದೆ. ಆದರೆ ವರ್ಷಪೂರ್ತಿ ಅವರ ಹುಟ್ಟುಹಬ್ಬದ ನಿಮಿತ್ತ ಸಮಾಜಪರ ಕಾರ್ಯಕ್ರಮಗಳನ್ನು ನಡೆಸಲಿದ್ದೇವೆ ಎಂದು ಹಜಾರೆ ಅವರ ಸಹಾಯಕ ದತ್ತ ಅವಾರಿ ಅವರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಲೋಕಪಾಲ
ಮಸೂದೆ ಅನುಮೋದನೆಗೊಂಡರೆ ಅದರ ಸವಿಯಲ್ಲಿ ಮುಂದಿನ ವರ್ಷ ಹಜಾರೆ ಅವರ ಅಮೃತ ಮಹೋತ್ಸವ ( 75 ವರ್ಷ ) ಆಚರಣೆಗೆ ಬೃಹತ್ ಯೋಜನೆಗಳನ್ನು ಹಾಕಿಕೊಂಡಿರುವುದಾಗಿ ದತ್ತ ಅವಾರಿ ಹೇಳಿದ್ದಾರೆ.











Click it and Unblock the Notifications