ಸೋನಿಯಾ ಟ್ರಸ್ಟ್ ಆಸ್ತಿ ಬಹಿರಂಗಕ್ಕೆ ಬಿಜೆಪಿ ಸವಾಲು
ಡೆಹ್ರಾಡೂನ್,
ಜೂನ್ 14: ಯೋಗ ಗುರು ರಾಮದೇವ್ ಅವರು ತಮ್ಮ ನೇತೃತ್ವದ ಟ್ರಸ್ಟ್‌ಗಳ ಆಸ್ತಿಪಾಸ್ತಿ ವಿವರ ಬಹಿರಂಗ ಪಡಿಸಿದಂತೆಯೇ ಈಗ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೂ ತಮ್ಮ ನೇತೃತ್ವದ ಎಲ್ಲ ಟ್ರಸ್ಟ್‌ಗಳ ಆಸ್ತಿಪಾಸ್ತಿ ವಿವರಗಳನ್ನು ಬಹಿರಂಗ ಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. id="toptextpromo">ಯೋಗ
ಗುರು ಅವರು ನಡೆಸುವ ಟ್ರಸ್ಟ್‌ಗಳಿಗೆ ಬರುವ ನಿಧಿ ಬಗ್ಗೆ ಕಾಂಗ್ರೆಸ್ ನಾಯಕರು ಗುಮಾನಿ ವ್ಯಕ್ತಪಡಿಸಿದಾಗ ಯೋಗ ಗುರು ತಮ್ಮ ನೇತೃತ್ವದ ಎಲ್ಲ ಟ್ರಸ್ಟ್‌ಗಳಿಗೆ ಬರುವ ಹಣ, ಅದರ ಆಸ್ತಿಪಾಸ್ತಿ ವಿವರಗಳನ್ನು ಬಹಿರಂಗ ಪಡಿಸಿದ್ದಾರೆ. ಈಗ ತಮ್ಮ ನೇತೃತ್ವದ ಎಲ್ಲ ಟ್ರಸ್ಟ್‌ಗಳ ಆಸ್ತಿಪಾಸ್ತಿ ಮಾಹಿತಿ ಬಹಿರಂಗ ಪಡಿಸಬೇಕಾದ ಸರದಿ ಸೋನಿಯಾ ಗಾಂಧಿ ಅವರದ್ದು ಎಂದು ಬಿಜೆಪಿ ಪ್ರಧಾನ ಕಾರ‌್ಯದರ್ಶಿ ಮತ್ತು ಉತ್ತರಾಖಂಡದಲ್ಲಿನ ಬಿಜೆಪಿ ವ್ಯವಹಾರಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಥಾವರ್ ಚಂದ್ರ ಗೆಹ್ಲೋಟ್ ಹೇಳಿದರು. id='are-slot-1' class='oiad oi-axt oiadv'> id='top-searched-articles'>ರಾಜೀವ್
ಗಾಂಧಿ ಚಾರಿಟೇಬಲ್ ಟ್ರಸ್ಟ್ ಸೇರಿದಂತೆ ಸೋನಿಯಾ ಗಾಂಧಿ ಹತ್ತಾರು ಟ್ರಸ್ಟ್‌ಗಳ ನೇತೃತ್ವ ವಹಿಸಿದ್ದಾರೆ. ಈ ಎಲ್ಲ ಟ್ರಸ್ಟ್‌ಗಳಿಗೆ ಬರುವ ಹಣ ಎಷ್ಟು? ಅದು ಎಲ್ಲಿಗೆ ಹೋಗುತ್ತಿದೆ? ಎಂಬುದನ್ನು ಸೋನಿಯಾ ಅವರು ಜನತೆಗೆ ತಿಳಿಸಬೇಕು ಎಂದು ಗೆಹ್ಲೋಟ್ ಆಗ್ರಹಿಸಿದರು.











Click it and Unblock the Notifications